ಕರ್ನಾಟಕ

karnataka

ETV Bharat / sports

ವಾಸಿಮ್​ ಜಾಫರ್​ ನೆಚ್ಚಿನ ಏಕದಿನ ತಂಡಕ್ಕೆ ಧೋನಿ ನಾಯಕ... ಭಾರತದ ನಾಲ್ವರಿಗೆ ಸ್ಥಾನ - ಜಾಫರ್​ ನೆಚ್ಚಿನ ತಂಡದಲ್ಲಿ ಭಾರತದ ನಾಲ್ವರಿಗೆ ಸ್ಥಾನ

ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿರುವ ವಿಶ್ವದ ಏಕೈಕ ನಾಯಕ ಎಂಎಸ್​ ಧೋನಿಯನ್ನು ಜಾಫರ್​ ತಮ್ಮ ನೆಚ್ಚಿನ ತಂಡದ ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಇನ್ನು ಧೋನಿ ಜೊತೆ ಕೊಹ್ಲಿ, ರೋಹಿತ್​ ಹಾಗೂ ಸಚಿನ್​ ತೆಂಡೂಲ್ಕರ್​ ಅವರನ್ನು ಕೂಡ 11ರ ಬಳಗದಲ್ಲಿ ಆಯ್ಕೆ ಮಾಡಿದ್ದಾರೆ.

Jaffer all time ODI Team
ವಾಸಿಮ್​ ಜಾಫರ್​ ನೆಚ್ಚಿನ ಏಕದಿನ ತಂಡಕ್ಕೆ ಧೋನಿ ನಾಯಕ

By

Published : Apr 4, 2020, 3:02 PM IST

ಮುಂಬೈ: ಭಾರತ ತಂಡದ ಮಾಜಿ ಆಟಗಾರ ವಾಸಿಮ್​ ಜಾಫರ್​ ತಮ್ಮ ನೆಚ್ಚಿನ ಆಲ್​ಟೈಮ್​ ಏಕದಿನ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಎಂಎಸ್​ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದಾರೆ.

ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿರುವ ವಿಶ್ವದ ಏಕೈಕ ನಾಯಕ ಎಂಎಸ್​ ಧೋನಿಯನ್ನು ಜಾಫರ್​ ತಮ್ಮ ನೆಚ್ಚಿನ ತಂಡದ ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಇನ್ನು ಧೋನಿ ಜೊತೆ ಕೊಹ್ಲಿ, ರೋಹಿತ್​ ಹಾಗೂ ಸಚಿನ್​ ತೆಂಡೂಲ್ಕರ್​ ಅವರನ್ನು ಕೂಡ 11ರ ಬಳಗದಲ್ಲಿ ಆಯ್ಕೆ ಮಾಡಿದ್ದಾರೆ.

ಸಚಿನ್​ ಹಾಗೂ ರೋಹಿತ್​ ಶರ್ಮಾ ಆರಂಭಿಕ ಬ್ಯಾಟ್ಸ್​ಮನ್​ಗಳಾದರೆ, ರಿಚರ್ಡ್ಸನ್​ ಹಾಗೂ ಕೊಹ್ಲಿ ನಂಬರ್​ 3 ಹಾಗೂ 4ನೇ ಬ್ಯಾಟ್ಸ್​ಮನ್​ಗಳಾಗಿದ್ದರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​, ಇಂಗ್ಲೆಂಡ್​ನ ಬೆನ್​ಸ್ಟೋಕ್ಸ್​ 5 ಮತ್ತು6 ಧೋನಿ 7 ನೇ ಕ್ರಮಾಂಕ ಪಡೆದಿದ್ದಾರೆ.

ಬೌಲರ್​ಗಳ ವಿಭಾಗದಲ್ಲಿ ಪಾಕಿಸ್ತಾನದ ವಾಸಿಮ್​ ಅಕ್ರಮ್, ವಿಂಡೀಸ್​ನ ಜೊಯೆಲ್​ ಗಾರ್ನರ್​ ಹಾಗೂ ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾತ್​, ಶೇನ್ ವಾರ್ನ್​ /ಸಕ್ಲೈನ್​ ಮುಸ್ತಾಕ್​ ಜಾಫರ್​​ರ 11ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.

ಆಶ್ಚರ್ಯವೆಂದರೆ ಜಾಫರ್​ ಆಸ್ಟ್ರೇಲಿಯಾ ತಂಡಕ್ಕೆ 3 ವಿಶ್ವಕಪ್​ ಗೆದ್ದುಕೊಟ್ಟ ನಾಯಕ ರಿಕಿ ಪಾಂಟಿಂಗ್​ 12 ನೇ ಆಟಗಾರನನ್ನಾಗಿ ಆಯ್ಕೆ ಮಾಡಿದ್ದಾರೆ.

ABOUT THE AUTHOR

...view details