ನಾಗ್ಪುರ:ಭಾರತ ತಂಡದ ಮಾಜಿ ಆಟಗಾರ ಹಾಗೂ ವಿದರ್ಭ ತಂಡದ ಹಿರಿಯ ಬ್ಯಾಟ್ಸ್ಮನ್ ವಾಸೀಮ್ ಜಾಫರ್ ರಣಜಿ ಕ್ರಿಕೆಟ್ನಲ್ಲಿ 12000 ರನ್ ಪೂರೈಸಿದ್ದಾರೆ.
ವಿದರ್ಭ ಹಾಗೂ ಮುಂಬೈ ತಂಡಗಳನ್ನು ಪ್ರತಿನಿಧಿಸಿರುವ ವಾಸೀಮ್ ಜಾಫರ್ 1996ರಿಂದ 2020ರವರೆಗೆ 150 ಪಂದ್ಯಗಳನ್ನಾಡಿದ್ದು 12 ಸಾವಿರ ರನ್ ಪೂರೈಸಿದ ಮೊದಲಿಗ ಹಾಗೂ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ವಿಧರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಆರಂಭವಾಗಿರುವ ರಣಜಿ ಮುಂಬೈ ವಿರುದ್ಧದ ಪಂದ್ಯದಲ್ಲಿ ವಾಸೀಂ ಜಾಫರ್ ಈ ದಾಖಲೆಗೆ ಪಾತ್ರರಾಗಿದ್ದಾರೆ. ಜಾಫರ್ 2019- 2020ನೇ ಸಾಲಿನ ಆರಂಭಕ್ಕೂ ಮುನ್ನ 11,775 ರನ್ ಗಳಿಸಿದ್ದರು. ಇದೀಗ 12 ಸಾವಿರ ರನ್ಗಳ ಮೈಲಿಗಲ್ಲು ತಲುಪಿದ್ದಾರೆ.
41 ವರ್ಷದ ಜಾಫರ್ ಭಾರತ ಕ್ರಿಕೆಟ್ ತಂಡದ ಪರ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿದ್ದರು.