ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಯಿಸುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ವಾಷಿಂಗ್ಟನ್ ಸುಂದರ್ 110 ವರ್ಷಗಳ ಹಿಂದಿನ ವಿಶೇಷ ದಾಖಲೆಯೊಂದನ್ನು ಬ್ರೇಕ್ ಮಾಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ನ ಕೊನೆಯ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಾಷಿಂಗ್ಟನ್ ಸುಂದರ್, 8ನೇ ವಿಕೆಟ್ ಜೊತೆಯಾಟದಲ್ಲಿ ಶಾರ್ದುಲ್ ಠಾಕೂರ್ರೊಂದಿಗೆ 123 ರನ್ ಸೇರಿಸಿದ್ದರು. ಇದು ಗಬ್ಬಾ ಮೈದಾನದಲ್ಲಿ 30 ವರ್ಷಗಳ ನಂತರ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಈ ಹಿಂದಿನ ದಾಖಲೆಯೂ ಕೂಡ ಭಾರತೀಯರ ಹೆಸರಿನಲ್ಲೇ ಇದ್ದು, 1991 ರಲ್ಲಿ ಭಾರತದ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ 58 ರನ್ ಸೇರಿಸಿದ್ದರು.
ಇನ್ನು ಈ ಪಂದ್ಯದಲ್ಲಿ 62 ರನ್ ಸಿಡಿಸಿದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಪಾದಾರ್ಪಣೆ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್ ಬಾರಿಸಿದ 7ನೇ ಕ್ರಮಾಂಕದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ 1911ರಲ್ಲಿ ಇಂಗ್ಲೆಂಡ್ನ ಫ್ರಾಂಕ್ ಫೋಸ್ಟರ್ 56 ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಆಸ್ಟ್ರೇಲಿಯಾದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್ಗಳಿಸಿದ 7ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳು
- ವಾಷಿಂಗ್ಟನ್ ಸುಂದರ್ 62
- ಫ್ರಾಂಕ್ ಫೋಸ್ಟರ್ (ಇಂಗ್ಲೆಂಡ್) 56
- ಫ್ರಾನ್ಸಿಸ್ ಫಾರ್ಡ್ (ಇಂಗ್ಲೆಂಡ್) 48
- ಯಂಗ್ ಜಾಕ್ ಹಾರ್ನೆ (ಇಂಗ್ಲೆಂಡ್) 43
- ರಾಯ್ ಸ್ಟೆಟ್ಮ್ಯಾನ್ (ಇಂಗ್ಲೆಂಡ್) 41
- ಜೆಫ್ ಡ್ಯೂಜನ್ (ವೆಸ್ಟ್ಇಂಡೀಸ್) 41