ದುಬೈ:ಆರಂಭದಲ್ಲಿ ಸ್ವಲ್ಪ ನರ್ವಸ್ ಆಗಿದ್ದ ನಾನು ಅದಕ್ಕಿಂತಲೂ ಹೆಚ್ಚು ಉತ್ಸುಕನಾಗಿದ್ದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಮೊದಲ ಪಂದ್ಯವನ್ನಾಡಿರುವ ಯುವ ಪ್ಲೇಯರ್ ರವಿ ಬಿಷ್ಣೋಯ್ ಹೇಳಿಕೊಂಡಿದ್ದಾರೆ.
ನಿನ್ನೆ ದೆಹಲಿ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ 4 ಓವರ್ನಲ್ಲಿ ಕೇವಲ 22ರನ್ ನೀಡಿ ಪ್ರಮುಖ ಬ್ಯಾಟ್ಸ್ಮನ್ ರಿಷಭ್ ಪಂತ್ ವಿಕೆಟ್ ಪಡೆದುಕೊಳ್ಳುವಲ್ಲಿ ಬಿಷ್ಣೋಯ್ ಯಶಸ್ವಿಯಾಗಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಕ್ರಿಕೆಟರ್, ನನಗೆ ಮೊದಲ ಪಂದ್ಯ ಆಗಿದ್ದ ಕಾರಣ ಆರಂಭದಲ್ಲಿ ಸ್ವಲ್ಪ ನರ್ವಸ್ಗೆ ಒಳಗಾಗಿದ್ದೇನು. ಆದರೆ ಅದಕ್ಕಿಂತಲೂ ಹೆಚ್ಚು ಉತ್ಸುಕನಾಗಿದ್ದು, ಉತ್ತಮವಾದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಕೊಡುಗೆ ನೀಡಬೇಕು ಎಂಬುದು ನನ್ನ ಆಸೆಯಾಗಿತ್ತು ಎಂದು ಕಿಂಗ್ಸ್ ಪಂಜಾಬ್ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿದ್ದಾರೆ.