ಮುಂಬೈ:ಆಸ್ಟ್ರೇಲಿಯಾದ ಡೇಂಜರಸ್ ಓಪನರ್ ಡೇವಿಡ್ ವಾರ್ನರ್, ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಯಾರ್ಕರ್ಗೆ ಸರ್ಪ್ರೈಸ್ ಆಗಿದ್ದಾರಂತೆ.
ಬುಮ್ರಾ ಯಾರ್ಕರ್ಗೆ ವಾರ್ನರ್ ಶಾಕ್: ಎಡಗೈ ಬ್ಯಾಟ್ಸ್ಮನ್ ಹೇಳಿದ್ದೇನು? - ಕ್ರಿಕೆಟ್ ಸುದ್ದಿ
ಬುಮ್ರಾ ಅವರಂತಹ ವೇಗಿಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಎಡಗೈ ಬ್ಯಾಟ್ಸ್ಮನ್ ವಾರ್ನರ್, ಆಟದಲ್ಲಿ ಸ್ಥಿರತೆ ಕಾಪಾಡುವುದರಿಂದ ಎಲ್ಲವೂ ಸಾಧ್ಯ. ಬುಮ್ರಾ ಅವರ ಬೌನ್ಸರ್ಗಳು ಶಾಕ್ ಕೊಡುತ್ತದೆ. ಅವರ ಯಾರ್ಕರ್ ಎಸೆತಗಳು ಆಶ್ಚರ್ಯವುಂಟುಮಾಡುತ್ತವೆ. ಅವರ ಪ್ರತಿ ಎಸೆತಗಳ ಬದಲಾವಣೆಗೆ ಒಗ್ಗಿಕೊಳ್ಳುವುದು ತುಂಬಾ ಕಷ್ಟ. ಅದು ಲಸಿತ್ ಮಾಲಿಂಗರ ಎಸೆತೆಗಳಂತೆ ಕ್ಲಿಷ್ಟಕರ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಿತು. ಪಂದ್ಯವನ್ನು ನಿರಾಯಾಸವಾಗಿ 10 ವಿಕೆಟ್ಗಳಿಂದ ಗೆದ್ದು ಬೀಗಿದ ಆಸಿಸ್ ಸರಣಿಯಲ್ಲಿ ಶುಭಾರಂಭ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್ ಹಾಗೂ ನಾಯಕ ಆರೋನ್ ಫಿಂಚ್ ಅಜೇಯ ಜತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಪಂದ್ಯದಲ್ಲಿ ವಾರ್ನರ್ 128 ರನ್ ಸಿಡಿಸಿದರೆ, ಫಿಂಚ್ ಕೂಡಾ 110 ರನ್ ಸಿಡಿಸಿದರು.
ಬುಮ್ರಾ ಅವರಂತಹ ವೇಗಿಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಎಡಗೈ ಬ್ಯಾಟ್ಸ್ಮನ್ ವಾರ್ನರ್, ಆಟದಲ್ಲಿ ಸ್ಥಿರತೆ ಕಾಪಾಡುವುದರಿಂದ ಎಲ್ಲವೂ ಸಾಧ್ಯ. ಬುಮ್ರಾ ಅವರ ಬೌನ್ಸರ್ಗಳು ಶಾಕ್ ಕೊಡುತ್ತವೆ. ಅವರ ಯಾರ್ಕರ್ ಎಸೆತಗಳು ಆಶ್ಚರ್ಯವುಂಟುಮಾಡುತ್ತವೆ. ಅವರ ಪ್ರತಿ ಎಸೆತಗಳ ಬದಲಾವಣೆಗೆ ಒಗ್ಗಿಕೊಳ್ಳುವುದು ತುಂಬಾ ಕಷ್ಟ. ಅದು ಲಸಿತ್ ಮಾಲಿಂಗರ ಎಸೆತೆಗಳಂತೆ ಕ್ಲಿಷ್ಟಕರ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.