ಸಿಡ್ನಿ: ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸೀಮಿತ ಓವರ್ಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೂರು ಟೆಸ್ಟ್ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಹಿಂದೆ ಸರಣಿಯನ್ನು ಜುಲೈನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಕಾಟದಿಂದಾಗಿ ಸರಣಿಯನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ.
ಡೇವಿಡ್ ವಾರ್ನರ್ ಕ್ರಿಕೆಟ್ ದಾಖಲೆ "ಇಂಗ್ಲೆಂಡ್ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಡಲು ನಾವು ತೀರಾ ಉತ್ಸುಕರಾಗಿದ್ದೇವೆ. ಅಲ್ಲದೇ ನಾವು ಹೊಸತನದೊಂದಿಗೆ ಮೈದಾನಕ್ಕಿಳಿಯುತ್ತೇವೆ. ಇಂಗ್ಲೆಂಡ್ ತಂಡ ಕಳೆದ ಮೂರು ವಾರಗಳಿಂದ ಲಾಕ್ಡೌನ್ನಲ್ಲಿದ್ದು, ಕ್ವಾರಂಟೈನ್ನಲ್ಲಿದ್ದಾರೆ. ಆ ಬಳಿಕ ಅವರು ಐರ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಗೆ ಸಜ್ಜಾಗಲಿದ್ದಾರೆ" ಎಂದು ವಾರ್ನರ್ ಹೇಳಿಕೆಯನ್ನು ಸುದ್ದಿ ಮಾಧ್ಯಮವೊಂದು ಉಲ್ಲೇಖಿಸಿದೆ.
"ನಾವು ಮುಕ್ತ ಮನಸ್ಸಿನಿಂದ ಹೊಸತನದೊಂದಿಗೆ ಇಂಗ್ಲೆಂಡ್ಗೆ ಹಾರಲಿದ್ದೇವೆ. ಕ್ರಿಕೆಟ್ ಆಡಲು ಸಿದ್ಧರಾಗಿದ್ದೇವೆ ಎಂದು ಆಸ್ಟ್ರೇಲಿಯಾದ ಮಾಜಿ ಉಪನಾಯಕ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡವು ಈ ವರ್ಷದ ಮಾರ್ಚ್ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿತ್ತು.