ಸಿಡ್ನಿ:ಲಾಕ್ಡೌನ್ ಸಮಯದಲ್ಲಿ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ತಮ್ಮ ಕುಟುಂಬದೊಂದಿಗೆ ಕಳೆದಷ್ಟು ಉತ್ತಮ ಸಮಯವನ್ನು ಬೇರೆ ಯಾವುದೇ ಕ್ರಿಕೆಟ್ ಆಟಗಾರ ಕಳೆದಿಲ್ಲ ಎನಿಸುತ್ತದೆ. ಸದಾ ಹೊಸ - ಹೊಸ ಟಿಕ್ಟಾಕ್ ವಿಡಿಯೋ ಮಾಡುತ್ತಿರುವ ವಾರ್ನರ್ ಈಗ ಮತ್ತೆ ಸುದ್ದಿಯಾಗಿದ್ದಾರೆ.
ಪಂಜಾಬಿ ಹಾಡಿಗೆ ಪತ್ನಿ, ಪುತ್ರಿಯರೊಂದಿಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವಿಡಿಯೋ - ವಾರ್ನರ್ ಟಿಕ್ಟಾಕ್ ವಿಡಿಯೋ
ನೂತನ ಟಿಕ್ಟಾಕ್ ವಿಡಿಯೋ ಮಾಡಿರುವ ವಾರ್ನರ್, ಪತ್ನಿ ಮತ್ತು ತಮ್ಮ ಇಬ್ಬರು ಪುತ್ರಿಯರೊಂದಿಗೆ ಪಂಜಾಬ್ನ ಜನಪ್ರಿಯ'ಸ್ಲೋಲಿ ಸ್ಲೋಲಿ' ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇಂದು ಮತ್ತೊಂದು ಟಿಕ್ಟಾಕ್ ವಿಡಿಯೋ ಮಾಡಿರುವ ವಾರ್ನರ್, ಪತ್ನಿ ಮತ್ತು ತಮ್ಮ ಇಬ್ಬರು ಪುತ್ರಿಯರೊಂದಿಗೆ ಪಂಜಾಬ್ನ ಜನಪ್ರಿಯ ಗೀತೆ 'ಸ್ಲೋಲಿ ಸ್ಲೋಲಿ' ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಳೆದ ವಾರ ಪ್ರಭುದೇವ ಅವರ ಸೂಪರ್ ಹಿಟ್ ಮುಕ್ಕಾಬುಲಾ ಗೀತೆಗೆ ನೃತ್ಯ ಮಾಡಿ ಸಖತ್ ಸದ್ದು ಮಾಡಿದ್ದರು. ಅಲ್ಲದೇ ಸೂಪರ್ ಹಿಟ್ ತೆಲುಗು ಸಿನಿಮಾ ಹಾಡುಗಳು ಮತ್ತು ಡೈಲಾಗ್ಗಳಿಗೆ ಟಿಕ್ಟಾಕ್ ವಿಡಿಯೋ ಮಾಡಿದ್ದ ವಾರ್ನರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಕ್ರಿಕೆಟ್ನಿಂದ ಬಿಡುವು ಸಿಕ್ಕಿದ್ದು, ವಾರ್ನರ್ ತಮ್ಮ ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.