ಲಾಹೋರ್ :ಸ್ವಿಂಗ್ ಮಾಸ್ಟರ್ ಎಂದೇ ಖ್ಯಾತಿಯಾಗಿರುವ ವಾಕರ್ ಯೂನಿಸ್ ಮೋಸದಿಂದ ಚೆಂಡನ್ನು ಬಳಸಿ ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡುತ್ತಿದ್ದರು ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಸಿಫ್ ಆರೋಪಿಸಿದ್ದಾರೆ.
ವಾಕರ್ ಯೂನಿಸ್ಗೆ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದಕ್ಕೆ ಬರುತ್ತಿರಲಿಲ್ಲ. ರಿವರ್ಸ್ ಸ್ವಿಂಗ್ ಕಲೆಯನ್ನು ವೃತ್ತಿ ಜೀವನದ ಅಂತ್ಯದ ಕಾಲದಲ್ಲಿ ಮಾತ್ರ ಬೆಳೆಸಿಕೊಂಡಿದ್ದರೆಂದು ಸಂದರ್ಶನವೊಂದರಲ್ಲಿ ಸ್ಫೋಟಕ ವಿಚಾರ ಹಂಚಿಕೊಂಡಿದ್ದಾರೆ.
"ವಾಕರ್ ಯೂನಿಸ್ ಚೆಂಡನ್ನು ಮೋಸದಿಂದ ಉಪಯೋಗಿಸಿ ರಿವರ್ಸ್ ಸ್ವಿಂಗ್ ಮಾಡುತ್ತಿದ್ದರು. ಅಲ್ಲದೆ ಅವರಿಗೆ ವೃತ್ತಿ ಜೀವನದುದ್ದಕ್ಕೂ ಹೊಸ ಚೆಂಡಿನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಗೊತ್ತಿರಲಿಲ್ಲ. ವೃತ್ತಿ ಜೀವನ ಕೊನೆಗೊಳ್ಳುತ್ತಿದ್ದ ಸಮಯದಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದನ್ನು ಕಲಿತಿದ್ದರು" ಎಂದು ಆಸೀಫ್ ಆರೋಪಿಸಿದ್ದಾರೆ.
"ಜನರು ವಾಕರ್ ಯೂನಿಸ್ರನ್ನು ಸ್ವಿಂಗ್ ಮಾಸ್ಟರ್ ಎಂದು ತಿಳಿದಿದ್ದಾರೆ. ಆದರೆ, ಆತ ಒಬ್ಬನೇ ಒಬ್ಬ ಸ್ವಿಂಗ್ ಬೌಲರ್ನನ್ನು ಅಭಿವೃದ್ಧಿ ಪಡಿಸಿಲ್ಲ. ಇಂತಹ ಜನರು ಕಳೆದ 20 ವರ್ಷಗಳಿಂದ ಪಾಕಿಸ್ತಾನ ತಂಡದ ಕೋಚ್ಗಳಾಗಿದ್ದಾರೆ. ಆದರೆ, ಕೌಶಲ್ಯಭರಿತ ಬೌಲರ್ಗಳನ್ನು ಮಾತ್ರ ಪೂರೈಸಿಲ್ಲ. ಸಂಯೋಜನೆಯಲ್ಲಿ ಸ್ಥಿರತೆಯ ಕೊರತೆ ಕಾಣುತ್ತಿದೆ. ನಾವು ಹೆಚ್ಚು ಬೌಲರ್ಗಳನ್ನು ಹೊಂದಿದ್ದೇವೆ ಹೊರತು ಗುಣಮಟ್ಟದ ಬೌಲರ್ಗಳನ್ನಲ್ಲ" ಎಂದು ಕಿಡಿ ಕಾರಿದ್ದಾರೆ.
ಪಾಕಿಸ್ತಾನದ ಪರ ವಾಕರ್ ಯೂನಿಸ್ ಏಕದಿನ ಕ್ರಿಕೆಟ್ನಲ್ಲಿ 373 ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ 416 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಅವರು ಪಾಕ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.