ಕರ್ನಾಟಕ

karnataka

ETV Bharat / sports

ಪ್ಯಾಟ್​ ಕಮ್ಮಿನ್ಸ್​ರಿಂದ ಗಾಯ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿದ್ದೇನೆ: ಕಮಲೇಶ್​ ನಾಗರಕೋಟಿ - ಕೋಲ್ಕತ್ತಾ ನೈಟ್​ ರೈಡರ್ಸ್​

2018ರ ಐಪಿಎಲ್​ ಹರಾಜಿನಲ್ಲಿ ಕಮಲೇಶ್​ ನಾಗರಕೋಟಿಯನ್ನು ತೀವ್ರ ಪೈಪೋಟಿಯ ನಡುವೆ ಕೆಕೆಆರ್​ 3.2 ಕೋಟಿ ರೂ. ನೀಡಿ ಖರೀದಿಸಿತ್ತು..

ಐಪಿಎಲ್​ 2020
ಕಮಲೇಶ್​ ನಾಗರಕೋಟಿ

By

Published : Sep 2, 2020, 11:03 PM IST

ಅಬುಧಾಬಿ:ಭಾರತ ಭವಿಷ್ಯದ ಸ್ಟಾರ್​ ಎಂದೇ ಬಿಂಬಿತವಾಗಿದ್ದ 2018ರ ಅಂಡರ್​ 19 ವಿಶ್ವಕಪ್​ನಲ್ಲಿ ಮಿಂಚಿದ್ದ ಯುವ ಬೌಲರ್​ ಕಮಲೇಶ್ ನಾಗರಕೋಟಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ರಿಂದ ಗಾಯ ನಿರ್ವಹಣೆಯ ಪಾಠ ಕಲಿಯಬೇಕೆಂದು ಬಯಸಿದ್ದಾರೆ.

ಪ್ಯಾಟ್​ ಕಮ್ಮಿನ್ಸ್

ಪೃಥ್ವಿ ಶಾ ನೇತೃತ್ವದ ವಿಶ್ವಕಪ್​ ವಿಜೇತ ತಂಡದ ಭಾಗವಾಗಿದ್ದ ನಾಗರಕೋಟಿ 2018ರಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಸೇರ್ಪಡೆಯಾದರೂ ಗಾಯ ಅವರಿಗೆ ಒಮ್ಮೆಯೂ ಆಡುವ ಅವಕಾಶ ನೀಡಲಿಲ್ಲ. ಆದರೆ, ಈ ಬಾರಿ ಫಿಟ್​ ಆಗಿದ್ದು, ದಿಗ್ಗಜರಿರುವ ತಂಡದಲ್ಲಿ ಪದಾರ್ಪಣೆ ಮಾಡಲು ಹಾತೊರೆಯುತ್ತಿದ್ದಾರೆ. 15.5 ಕೋಟಿಗೆ ಕೆಕೆಆರ್​ ಸೇರಿರುವ ಕಮಿನ್ಸ್​ರಿಂದ ಮಹತ್ವದ ಸಲಹೆಗಳನ್ನು ಪಡೆಯಲು ಯುವ ಬೌಲರ್​ ಕಾಯುತ್ತಿದ್ದಾರೆ.

ಕಮಲೇಶ್​ ನಾಗರಕೋಟಿ

"ಕಮ್ಮಿನ್ಸ್​ ದೀರ್ಘಾವಧಿಯವರೆಗೆ ಗಾಯಕ್ಕೀಡಾಗಿದ್ದರು. ಆದ್ದರಿಂದ ಅವರು ಆ ಮೂರು ನಾಲ್ಕು ವರ್ಷಗಳಲ್ಲಿ ಅವರ ಮನಸ್ಥಿತಿ ಏನಾಗಿತ್ತು. ಅವರು ತಮ್ಮನ್ನು ತಾವೂ ಹೇಗೆ ಪ್ರೇರೇಪಿಸಿಕೊಂಡರು ಮತ್ತು ಪುನಾರಾಗಮನಕ್ಕೆ ಹೇಗೆ ಸಿದ್ದರಾದರು" ಎಂದು ನಾನು ಕೇಳಲು ಬಯಸುತ್ತೇನೆ ಎಂದು ನಾಗರಕೋಟಿ ತಿಳಿಸಿದ್ದಾರೆ.

ಪ್ಯಾಟ್​ ಕಮ್ಮಿನ್ಸ್

ನನಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಕಮ್ಮಿನ್ಸ್​ರಿಂದ ಸಲಹೆಗಳನ್ನು ಪಡೆಯುತ್ತೇನೆ. ಬ್ಯಾಟ್ಸ್​​ಮನ್​ಗಳ ವಿಚಾರಕ್ಕೆ ಬಂದರೆ ನಮ್ಮ ಕೋಚ್​ ಬ್ರೆಂಡನ್​ ಮೆಕಲಮ್​ಗೆ ನೆಟ್ಸ್​ನಲ್ಲಿ ಬೌಲಿಂಗ್​ ಮಾಡುವುದು ನನ್ನ ಕನಸು. ನಾನು ಅವರ ಆಟವನ್ನು ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್​ ಶೈಲಿ ನಿಜಕ್ಕೂ ಆಕ್ರಮಣಕಾರಿ ಮತ್ತು ಅನನ್ಯ. ಓಪನರ್​ಗಳ ಮನಸ್ಥಿತಿಯ ಬಗ್ಗೆ ನಾನು ಅವರಿಂದ ಸಾಕಷ್ಟನ್ನು ಕಲಿಯಬಹುದೆಂದು ನಾನು ಭಾವಿಸಿದ್ದೇನೆ. ಅವರು ಸ್ವತಃ ಓಪನಿಂಗ್​ ಬ್ಯಾಟ್ಸ್​ಮನ್​ ಆಗಿದ್ದರಿಂದ ಆರಂಭಿಕರ ಮನಸ್ಥಿತಿಯನ್ನು ರೀಡ್ ಮಾಡಲು ಅವರು ನನಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

2018ರ ಐಪಿಎಲ್​ ಹರಾಜಿನಲ್ಲಿ ಕಮಲೇಶ್​ ನಾಗರಕೋಟಿಯನ್ನು ತೀವ್ರ ಪೈಪೋಟಿಯ ನಡುವೆ ಕೆಕೆಆರ್​ 3.2 ಕೋಟಿ ರೂ.ನೀಡಿ ಖರೀದಿಸಿತ್ತು.

ABOUT THE AUTHOR

...view details