ಸಿಡ್ನಿ:ಮ್ಯಾಥ್ಯೂ ವೇಡ್ ಅರ್ಧಶತಕ ಹಾಗೂ ಸ್ಟಿವ್ ಸ್ಮಿತ್ ಅವರು 46 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ ಭಾರತದ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 195 ರನ್ಗಳ ಸ್ಪರ್ಧಾತ್ಮ ಟಾರ್ಗೆಟ್ ನೀಡಿದೆ.
ಸರಣಿಯನ್ನು ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಸೋತರು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ವೇಡ್ ಅದ್ಭುತ ಆರಂಭ ಒದಗಿಸಿಕೊಟ್ಟರು. ವೇಡ್ ಕೇವಲ 32 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 58 ರನ್ಗಳಿಸಿದರು. ಆದರೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಶಾರ್ಟ್ 9 ರನ್ಗಳಿಸಿ ನಟರಾಜನ್ಗೆ ವಿಕೆಟ್ ಒಪ್ಪಿಸಿದರು.