ಹೈದರಾಬಾದ್: ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಮೊದಲ ಆದ್ಯತೆಯ ಆಯ್ಕೆಯಾಗಿರುವ ರೋಹಿತ್ ಶರ್ಮಾ ಜೊತೆಗೆ ಕೆ.ಎಲ್.ರಾಹುಲ್ ಆರಂಭಿಕ ಜೋಡಿಯಾದರೆ ಸೂಕ್ತ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗರ ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.
ಶಿಖರ್ ಧವನ್ ಗಾಯದಿಂದ ಮರಳಿದ ನಂತರ ಭಾರತ ತಂಡಕ್ಕೆ ಮರಳಿದ್ದು, ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಮುಂಬರುವ ಸರಣಿಗೆ ರೋಹಿತ್ ಶರ್ಮಾ ಜೊತೆಗೆ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಆದರೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಕನ್ನಡಿಗ ರಾಹುಲ್ ಪರ ನಿಂತಿದ್ದು, ಹಿಟ್ಮ್ಯಾನ್ ಜೊತೆಗೆ ರಾಹುಲ್ ಸೂಕ್ತವಾದ ಜೊತೆಗಾರ ಎಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿಜಕ್ಕೂ ಎರಡನೇ ಆರಂಭಿಕ ಬ್ಯಾಟ್ಸ್ಮನ್ ಆಯ್ಕೆ ತುಂಬಾ ಕಠಿಣವಾಗಲಿದೆ. ಏಕೆಂದರೆ ರೋಹಿತ್ ಶರ್ಮಾ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ತಂಡದ ಖಾಯಂ ಆರಂಭಿಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.