ಕರ್ನಾಟಕ

karnataka

ETV Bharat / sports

ವಿಷಾನಿಲ ಸೋರಿಕೆ ಅವಘಡ: ಪ್ರಾಣ ಕಳೆದುಕೊಂಡವರಿಗೆ ವಿರಾಟ್​, ಯುವಿ, ಶಿಖರ್​, ಸೈನಾ ಸಂತಾಪ

ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ, ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯ ಸೇರಿದಂತೆ ಅನೇಕರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

Vizag Gas Leak
Vizag Gas Leak

By

Published : May 7, 2020, 3:19 PM IST

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿನ ಗ್ಯಾಸ್​ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​, ಆರಂಭಿಕ ಅಟಗಾರ ಶಿಖರ್​ ಧವನ್​ ಸೇರಿ ಅನೇಕರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ವಿರಾಟ್​​ ಕೊಹ್ಲಿ

ಅನಿಲ ದುರಂತ ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಪ್ರತಿಯೊಬ್ಬರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಟ್ವೀಟ್​ ಮಾಡಿದ್ದಾರೆ.

ಯುವರಾಜ್​ ಸಿಂಗ್​

ವೈಜಾಗ್​ ಅನಿಲ ಸೋರಿಕೆ ದುರದೃಷ್ಟಕರ. ನನ್ನ ಪ್ರಾರ್ಥನೆ ಅಲ್ಲಿರುವ ಎಲ್ಲರೊಂದಿಗಿದೆ ಎಂದು ಯುವಿ ಟ್ವೀಟ್​ ಮಾಡಿದ್ದಾರೆ.

ಶಿಖರ್​ ಧವನ್​

ಘಟನೆ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದೇನೆ. ಪ್ರಾಣ ಕಳೆದುಕೊಂಡ ಎಲ್ಲ ಕುಟುಂಬದವರಿಗೆ ಸಾವಿನ ಧೈರ್ಯ ತುಂಬುವ ಶಕ್ತಿ ದೇವರು ನೀಡಲಿ. ವಿಶಾಖಪಟ್ಟಣಂ ಯೋಗಕ್ಷೇಮಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ.

ಸೈನಾ ನೆಹ್ವಾಲ್

ಬಹಳ ನೋವಿನ ಸಂಗತಿ. ಅನಿಲ ದುರಂತ ಮಾನವನ ಪ್ರಾಣಹಾನಿಗೆ ಕಾರಣ. ಪೀಡಿತ ಕುಟುಂಬಗಳಿಗೆ ಧೈರ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವೆ.

ರವೀಂದ್ರ ಜಡೇಜಾ

ಪ್ರಾಣಹಾನಿ ಯಾವಾಗಲೂ ದುಃಖಕರ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಯಲ್ಲಿರುವ ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.

ಹಾರ್ದಿಕ್​ ಪಾಂಡ್ಯಾ

ವೈಜಾಗ್​ ಘಟನೆ ನೋಡಲು ಹೃದಯ ವಿದ್ರಾವಕ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿ ಎಂದು ಪಾಂಡ್ಯಾ ಟ್ವೀಟ್​ ಮಾಡಿದ್ದಾರೆ.

ರಿಷಭ್​ ಪಂತ್​

ವೈಜಾಗ್​​ನಿಂದ ಹೊರಬೀಳುತ್ತಿರುವ ದೃಶ್ಯ ನಿಜಕ್ಕೂ ಆಘಾತಕಾರಿ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಗೆ ದಾಖಲಾದವರು ಶೀಘ್ರವಾಗಿ ಚೇತರಿಸಿಕೊಳ್ಳಲಿ.

ABOUT THE AUTHOR

...view details