ಪುಣೆ:ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರನ್ಮಷಿನ್ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಶತಕದ ಬರದಲ್ಲಿದ್ದ ಕೊಹ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಎರಡು ಶತಕ ಬಾರಿಸಿದ್ದಾರೆ.
ಶತಕದ ಬರ ನೀಗಿಸಿದ ಕೊಹ್ಲಿ... ವರ್ಷದ ಮೊದಲ ಟೆಸ್ಟ್ ಶತಕ ದಾಖಲು
ಮೊದಲ ದಿನದಾಟದಲ್ಲಿ ಅರ್ಧಶತಕದೊಂದಿಗೆ ಅಜೇಯರಾಗಿದ್ದ ಕೊಹ್ಲಿ ಇಂದು ಶತಕ ಪೂರೈಸಿ ಸಂಭ್ರಮಿಸಿದರು. ಆದರೆ, ಶತಕದ ಬಳಿಕವೂ ಬೌಂಡರಿಗಳ ಮೂಲಕ ರನ್ ಗಳಿಕೆಯನ್ನು ಹೆಚ್ಚಿಸುತ್ತಾ ಸಾಗಿದರು.
150ರ ಗಡಿ ದಾಟಿ ಒಂದಷ್ಟು ದಾಖಲೆ ಬರೆದ ಕೊಹ್ಲಿ ಆ ಬಳಿಕ ವೇಗವಾಗಿ ರನ್ ಕಲೆಹಾಕಿ ದ್ವಿಶತಕ ಸಿಡಿಸಿದರು. ಕೊಹ್ಲಿಯನ್ನು ಕಟ್ಟಿಹಾಕಲು ಹರಿಣಗಳು ಹೂಡಿದ ತಂತ್ರವೆಲ್ಲಾ ವಿಫಲವಾಗಿ ಕೊನೆಗೆ 295 ಎಸೆತದಲ್ಲಿ 200 ರನ್ ಗಳಿಸಿದ್ದಾರೆ. 28 ಬೌಂಡರಿ ಬಾರಿಸಿರುವ ಕೊಹ್ಲಿ ದ್ವಿಶತಕ ಇನ್ನಿಂಗ್ಸ್ನಲ್ಲಿ ಒಂದೂ ಸಿಕ್ಸರ್ ಇಲ್ಲ ಎನ್ನುವುದೇ ವಿಶೇಷ.
ಕೊಹ್ಲಿ ಶತಕದಬ್ಬರಕ್ಕೆ ಬ್ರಾಡ್ಮನ್, ಸಚಿನ್ ದಾಖಲೆ ಪತನ..!
ಟೆಸ್ಟ್ ಕ್ರಿಕೆಟ್ನಲ್ಲಿ ಏಳು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಅರು ದ್ವಿಶತಕ ಸಿಡಿಸಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಡಾನ್ ಬ್ರಾಡ್ಮನ್(12 ದ್ವಿಶತಕ) ಅತಿಹೆಚ್ಚು ದ್ವಿಶತಕ ಬಾರಿಸಿದ್ದಾರೆ. ಕುಮಾರ ಸಂಗಕ್ಕಾರ(11), ಬ್ರಿಯಾನ್ ಲಾರಾ(9) ಹಾಗೂ ನಂತರ ಸ್ಥಾನದಲ್ಲಿ ಜಂಟಿಯಾಗಿ ವಾಲಿ ಹಾಮ್ಮಂಡ್/ಮಹೇಲ ಜಯವರ್ಧನೆ/ವಿರಾಟ್ ಕೊಹ್ಲಿ ಇದ್ದಾರೆ.
ಟೆಸ್ಟ್ನಲ್ಲಿ ಏಳು ಸಾವಿರ ಗಳಿಕೆ:
ದ್ವಿಶತಕ ಗಳಿಸುವ ವೇಳೆಯಲ್ಲೇ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಏಳು ಸಹಸ್ರ ರನ್ಗಳ ಗಡಿಯನ್ನು ತಲುಪಿದ್ದಾರೆ.
138 ಇನ್ನಿಂಗ್ಸ್ನಲ್ಲಿ ಏಳು ಸಾವಿರ ರನ್ ಗಳಿಸಿರುವ ಕೊಹ್ಲಿ ವೇಗವಾಗಿ ಈ ಸಾಧನೆಗೈದ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ವಾಲಿ ಹಾಮ್ಮಂಡ್(131), ವಿರೇಂದ್ರ ಸೆಹ್ವಾಗ್(134) ಹಅಗೂ ಸಚಿನ್ ತೆಂಡುಲ್ಕರ್(136) ಇನ್ನಿಂಗ್ಸ್ಗಳಲ್ಲಿ ಏಳು ಸಾವಿರ ಟೆಸ್ಟ್ ರನ್ ಗಳಿಸಿದ್ದರು.