ಕರ್ನಾಟಕ

karnataka

ETV Bharat / sports

ಗುಡ್​ನ್ಯೂಸ್! ಹೈ ವೋಲ್ಟೇಜ್ ಪಂದ್ಯಕ್ಕೆ ವರುಣ ಕಾಟ ಇದೆ, ಆದ್ರೆ ಪಂದ್ಯ ರದ್ದಾಗಲ್ಲ! - ಮ್ಯಾಂಚೆಸ್ಟರ್

ಇಂದು ಭಾರತ-ಪಾಕ್ ನಡುವಿನ ಪಂದ್ಯಕ್ಕಾಗಿ ವಿಶ್ವದಾದ್ಯಂತ ಅಂದಾಜು 100 ಕೋಟಿ ಜನ ಕಾದು ಕುಳಿತಿದ್ದಾರೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್​ ಪಂದ್ಯ ಮಳೆಗೆ ರದ್ದಾಗಿದ್ದರಿಂದ ಬೇಸರದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪಾಕ್​ ವಿರುದ್ಧದ ಪಂದ್ಯ ಕಣ್ತುಂಬಿಕೊಳ್ಳುವ ಅವಕಾಶ ದೊರೆಕಿದೆ.

Manchester weather

By

Published : Jun 16, 2019, 1:52 PM IST

ಮ್ಯಾಂಚೆಸ್ಟರ್ :ಐಸಿಸಿ ವಿಶ್ವಕಪ್ 2019 ಆವೃತ್ತಿಯಲ್ಲಿ ಹೈ ವೋಲ್ಟೇಜ್​ ಕದನವೆಂದೇ ಪರಿಗಣಿಸಲಾಗಿರುವ ಇಂಡೋ-ಪಾಕ್​ ಪಂದ್ಯಕ್ಕೆ ವರುಣನ ಭಯ ಇದ್ದೇ ಇದೆ. ಆದರೆ ಪಂದ್ಯ ನಡೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಇನ್ನೇನು ಕೆಲವೇ ಹೊತ್ತಲ್ಲಿ ಆರಂಭವಾಗಲಿರುವ ಭಾರತ-ಪಾಕಿಸ್ತಾನ ನಡುವಿನ ಮ್ಯಾಚ್‌ ನೋಡಲು ವಿಶ್ವದಾದ್ಯಂತ ಸುಮಾರು 100 ಕೋಟಿ ಜನರು ಕಾತರರಾಗಿದ್ದಾರೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ ಮಳೆಗೆ ರದ್ದಾದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಭಾರತೀಯ ಕ್ರೀಡಾಭಿಮಾನಿಗಳಿಗೆ ಪಾಕ್​ ವಿರುದ್ಧದ ಪಂದ್ಯ ನೋಡುವ ಅವಕಾಶ ದೊರೆಕಿದೆ.

ಹವಾಮಾನ ಇಲಾಖೆ ಪ್ರಕಾರ, ಮ್ಯಾಂಚೆಸ್ಟರ್​ನಲ್ಲಿ ಈಗ ಮೋಡ ಕವಿದ ವಾತಾವರಣ ಇದೆ. ಮಧ್ಯಾಹ್ನ ವೇಳೆಗೆ ಚಿಕ್ಕದಾಗಿ ಮಳೆ ಸುರಿಯವ ಸಾಧ್ಯತೆ ಇದೆ. ಆದರೆ ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯುವ ದಿನ ಹವಾಮಾನ ತೀರಾ ಹದಗೆಟ್ಟಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಇಂದಿನ ಪರಿಸ್ಥಿತಿ ಉತ್ತಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details