ಹೈದರಾಬಾದ್:ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದು, ಕಿವಿಸ್ ನೆಲದಲ್ಲಿ ಅಬ್ಬರಿಸುತ್ತಿದೆ. ನ್ಯೂಜಿಲ್ಯಾಂಡ್ನಲ್ಲಿ ಭಾರತ ತಂಡ 5 ಟಿ-20, 3 ಏಕದಿನ, 2 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಈಗಾಗಲೇ ಭಾರತ ತಂಡ ಟಿ-20 ಸರಣಿಯನ್ನು 5-0 ದಿಂದ ಗೆದ್ದು ಐತಿಹಾಸಿಕ ದಾಖಲೆಯೊಂದಿಗೆ ಬೀಗಿದೆ.
ಸದ್ಯ ಏಕದಿನ ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಬುತ ಪ್ರದರ್ಶನದ ನಡುವೆಯೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಕನ್ನಡಿಗೆ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಆಟವಾಡಿ ತಂಡವನ್ನು ಬೃಹತ್ತ ಮೊತ್ತದತ್ತ ಕೊಂಡೊಯ್ದಿದ್ದರು. ಇವರಿಬ್ಬರ ಆಟಕ್ಕೆ ಹಲವು ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರು ಫಿದಾ ಆಗಿದ್ದಾರೆ.