ಮುಂಬೈ:ಮುಂಬೈ ವಿರುದ್ಧ ಅತೀ ವೇಗವಾಗಿ ಶತಕ ಸಿಡಿಸಿದ ಅಜರುದ್ದೀನ್ ಆಟಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹ್ವಾಗ್ ಸಖತ್ ಫಿದಾ ಆಗಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ನಲ್ಲಿ ಮೊಹಮ್ಮದ್ ಅಜರುದ್ದೀನ್ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಕೇರಳ ತಂಡ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿರುವ ವಿಚಾರ ಗೊತ್ತಿದೆ.
ಅಜರುದ್ದೀನ್ ಅತ್ಯುತ್ತಮ ಆಟಗಾರನಾಗಿದ್ದಾನೆ. ಮುಂಬೈನಂತಹ ಶ್ರೇಷ್ಠ ತಂಡದ ವಿರುದ್ಧ ಇಂತಹ ಇನ್ನಿಂಗ್ಸ್ ಆಡುವುದು ಸಾಮಾನ್ಯವಲ್ಲ. ಎರಡು ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ ಕೇರಳ ತಂಡಕ್ಕೆ ಆಸರೆಯಾಗಿ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಈ ಇನ್ನಿಂಗ್ಸ್ ನೋಡಿ ತುಂಬಾ ಸಂತೋಷವಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಕೇರಳ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಅಜರುದ್ದೀನ್ ಆಕರ್ಷಕ ಆಟದಿಂದ ಕೇವಲ 54 ಎಸೆತಕ್ಕೆ 137 ರನ್ಗಳನ್ನು ಕಲೆ ಹಾಕುವ ಮೂಲಕ 15.5 ಓವರ್‌ಗಳಲ್ಲಿ ಗುರಿ ಮುಟ್ಟಿತು.