ಕರ್ನಾಟಕ

karnataka

ETV Bharat / sports

ಇಂತಹ ಆಟಗಾರರಿಂದ ತಂಡಕ್ಕೆ ಹಿನ್ನಡೆ: ಪಾಂಡೆ ಆಟ ಪರೋಕ್ಷವಾಗಿ ಟೀಕಿಸಿದ ಸೆಹ್ವಾಗ್ - ಸ್ಯಾಟ್ ಪ್ಯಾಡಿಂಗ್

ವಾರ್ನರ್​ 3 ರನ್​ಗಳಿಗೆ 2ನೇ ಓವರ್​ನಲ್ಲಿ ಔಟಾಗುತ್ತಿದ್ದಂತೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಂತಹ ಪಾಂಡೆ 20 ಓವರ್​ನ ಕೊನೆಯ ಎಸೆತ ಎದುರಿಸಿ ಅಜೇಯರಾಗುಳಿದರು. ಅವರು 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 138ರ ಸ್ಟ್ರೈಕ್​ರೇಟ್​ನಲ್ಲಿ 61 ರನ್​ಗಳಿಸಿದರು.

ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್

By

Published : Apr 12, 2021, 5:53 PM IST

ಚೆನ್ನೈ:ಶನಿವಾರ ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 10 ರನ್​ಗಳಿಂದ ಸೋಲುಕಂಡಿದೆ. ಆದರೆ, 2ನೇ ಓವರ್​ನಲ್ಲಿ ಬ್ಯಾಟಿಂಗ್ ಬಂದು 20ನೇ ಓವರ್​ ವರೆಗೂ ಬ್ಯಾಟಿಂಗ್ ಮಾಡಿದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದ ಕನ್ನಡಿಗ ಮನೀಶ್ ಆಟವನ್ನು ಸ್ವಾರ್ಥದ ಆಟ ಎಂದು ಟ್ವಿಟರ್​ನಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ.

ವಾರ್ನರ್​ 3 ರನ್​ಗಳಿಗೆ 2ನೇ ಓವರ್​ನಲ್ಲಿ ಔಟಾಗುತ್ತಿದ್ದಂತೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಂತಹ ಪಾಂಡೆ 20 ಓವರ್​ನ ಕೊನೆಯ ಎಸೆತ ಎದುರಿಸಿ ಅಜೇಯರಾಗುಳಿದರು. ಅವರು 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 138ರ ಸ್ಟ್ರೈಕ್​ರೇಟ್​ನಲ್ಲಿ 61 ರನ್​ಗಳಿಸಿದರು.

ಅರ್ಧಶತಕ ಸಿಡಿಸಿದರೂ ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾದ ಮನೀಶ್​ ಪಾಂಡೆ ಸ್ಟ್ಯಾಟ್​ ಪ್ಯಾಟಿಂಗ್ ಎಂದು ಪರೋಕ್ಷವಾಗಿ ಸೆಹ್ವಾಗ್ ಟೀಕಿಸಿದ್ದಾರೆ, ಸ್ಟ್ಯಾಟ್​ ಪ್ಯಾಡಿಂಗ್ ಎಂದರೆ, ತಮ್ಮ ಅಂಕಿ - ಅಂಶಗಳಿಗಾಗಿ ಆಡುವುದು ಎಂದರ್ಥ. ಆದರೆ, ಸೆಹ್ವಾಗ್ ಯಾವುದೇ ಹೆಸರನ್ನು ಬಳಸದೇ ಈ ಟೀಕೆ ಮಾಡಿದ್ದಾರೆ.

"ಸ್ಟ್ಯಾಟ್ ಪ್ಯಾಡಿಂಗ್ ಬ್ಯಾಟ್ಸ್‌ಮನ್‌ಗಳನ್ನು ಗೇರ್‌ಗಳನ್ನು ತ್ವರಿತವಾಗಿ ಬದಲಾಯಿಸದೇ ದೀರ್ಘ ಓವರ್‌ಗಳನ್ನು ಬ್ಯಾಟಿಂಗ್ ಮಾಡುವುದು ತಂಡಕ್ಕೆ ಹಿನ್ನಡೆಯಾಗುತ್ತದೆ. ತಂಡದಲ್ಲಿ ಹಿಟ್ಟರ್​ಗಳಿದ್ದರೂ ಇಂತಹ ಆಟಗಾರರು ಅವರಿಗೆ ಕೆಲವೇ ಎಸೆತಗಳಗಳನ್ನು ಬಿಟ್ಟುಕೊಡುತ್ತಾರೆ. ಇದು ಅವರಿಗೆ(ಹಿಟ್ಟರ್​ಗಳಿಗೆ) ಪಂದ್ಯವನ್ನು ಮುಗಿಸಲು ತುಂಬಾ ಕಷ್ಟವಾಗಿಸುತ್ತಿದೆ.ಇದು ಕಳೆದ ವರ್ಷವೂ ನಡೆದಿತ್ತು. ಇಂತಹ ತಂಡಗಳು ಯಾವಾಗಲೂ ಸಮಸ್ಯೆಯನ್ನು ಹೊಂದಿರುತ್ತದೆ" ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಇದೇ ಆರೋಪಕ್ಕೆ ತುತ್ತಾಗಿದ್ದರು. ಆರೆಂಜ್​ ಕ್ಯಾಪ್ ಪಡೆದಿದ್ದ ಅವರು, ತಂಡದಲ್ಲಿ ಹೆಚ್ಚು ಎಸೆತಗಳನ್ನಾಡಿ ಕೊನೆಯಲ್ಲಿ ಗೆಲುವು ತಂದುಕೊಡುವಲ್ಲಿ ವಿಫಲರಾಗುತ್ತಿದ್ದರು.

ಇದನ್ನು ಓದಿ:ನಾವು ಐಪಿಎಲ್​ನಲ್ಲೇ ವಿನಾಶಕಾರಿ ಬ್ಯಾಟಿಂಗ್ ಬಳಗ ಹೊಂದಿದ್ದೇವೆ: ಕೆಕೆಆರ್​ ನಾಯಕ ಮಾರ್ಗನ್

ABOUT THE AUTHOR

...view details