ಕರ್ನಾಟಕ

karnataka

ETV Bharat / sports

ಐಪಿಎಲ್​ ಹರಾಜು ಪ್ರಕ್ರಿಯೆಗೆ ಎರಡು ದಿನ... ಆರ್​​ಸಿಬಿ ಫ್ಯಾನ್ಸ್​​ಗೆ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ಸಂದೇಶ! - ಅರ್​​ಸಿಬಿ ತಂಡಕ್ಕೆ ಕೊಹ್ಲಿ ಸಂದೇಶ

2020ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆ ನಾಡಿದ್ದು (ಡಿಸೆಂಬರ್​ 19) ಕೋಲ್ಕತ್ತಾದಲ್ಲಿ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಕೊಹ್ಲಿ ತಂಡದ ಫ್ಯಾನ್ಸ್​ಗೆ ಸಂದೇಶ ರವಾನೆ ಮಾಡಿದ್ದಾರೆ.

Royal Challengers Bangalore
ವಿರಾಟ್​​ ಕೊಹ್ಲಿ ಸಂದೇಶ

By

Published : Dec 17, 2019, 6:16 PM IST

ಕೋಲ್ಕತ್ತಾ:ಮುಂದಿನ ವರ್ಷ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯ ಹರಾಜು ಪ್ರಕ್ರಿಯೆ ನಾಡಿದ್ದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟಿಕೊಳ್ಳುವ ಉದ್ದೇಶದಿಂದ ಕೆಲ ಪ್ರಮುಖ ಪ್ಲೇಯರ್ಸ್​ಗಳಿಗೆ ಪ್ರಾಂಚೈಸಿಗಳು ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.

ಆವೃತ್ತಿ ಆರಂಭವಾಗಿದಾಗಿನಿಂದಲೂ ಚಾಂಪಿಯನ್​ ಪಟ್ಟ ಅಲಂಕಾರ ಮಾಡುವಲ್ಲಿ ವಿಫಲಗೊಂಡಿರುವ ರಾಯಲ್​ ಚಾಲೇಂಜರ್ಸ್​ ಬೆಂಗಳೂರು ಸಹ ಈ ಸಲ ಕೆಲ ಯಂಗ್​ ಪ್ಲೇಯರ್​ಗಳ ಮೇಲೆ ಕಣ್ಣಿಟ್ಟಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವ ತವಕದಲ್ಲಿದೆ. ಇದರ ಮಧ್ಯೆ ಟೀಂ ಇಂಡಿಯಾ ಹಾಗೂ ಆರ್​ಸಿಬಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ತನ್ನ ತಂಡದ ಫ್ಯಾನ್ಸ್​ಗೆ ಹೃದಯಸ್ಪರ್ಶಿ ಸಂದೇಶ ರವಾನೆ ಮಾಡಿದ್ದಾರೆ.

ಕೊಹ್ಲಿ ಹೇಳಿದ್ದೇನು!?ನಮ್​ ಹುಡುಗ್ರೇ​​, ಆರ್​​ಸಿಬಿ ಫ್ಯಾನ್ಸ್​ಗಳೇ ನಮಸ್ಕಾರ... ನಿಮ್ಮಕಡೆಯಿಂದ ನಾವು ಅತಿದೊಡ್ಡ ಪ್ರೀತಿ ಮತ್ತು ವಾತ್ಸಲ್ಯ ಸ್ವೀಕರಿಸಿದ್ದೇವೆ. ಮುಂಬರುವ ಆವೃತ್ತಿಗೆ ನಿಮ್ಮೆಲ್ಲರ ಪ್ರೀತಿ ನಮಗೆ ಬೇಕು. ಎಲ್ಲರಿಗೂ ತಿಳಿದಿರುವಂತೆ ಐಪಿಎಲ್​​ ಹರಾಜು ಪ್ರಕ್ರಿಯೆ ಬಂದಿದೆ. ತಂಡಕ್ಕೆ ಯಾರು ಸೇರಿಕೊಳ್ಳಲಿದ್ದಾರೆ ಎಂಬ ತವಕ ನಿಮ್ಮಲ್ಲಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ನಮ್ಮ ಮ್ಯಾನೆಜ್​ಮೆಂಟ್​ ಕೆಲಸ ಮಾಡುತ್ತಿದ್ದು, ಕೆಲವು ಸುತ್ತಿನ ಚರ್ಚೆ ಸಹ ನಡೆದಿವೆ. 2020ರಲ್ಲಿ ಉತ್ತಮ ತಂಡ ಹೊಂದಲು ನಾವು ನಿಮಗೆ ಭರವಸೆ ನೀಡುತ್ತೇವೆ. ನಿಮ್ಮ ಬೆಂಬಲ ಯಾವಾಗಲೂ ನಮಗೆ ಅಮೂಲ್ಯವಾದದು ಎಂದು ಟ್ವೀಟ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ.

ABOUT THE AUTHOR

...view details