ನವದೆಹಲಿ:ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 42ನೇ ಶತಕ ಸಿಡಿಸಿ ಮಿಂಚಿದ್ದು, ಇದೇ ರೀತಿ ಅವರ ಬ್ಯಾಟಿಂಗ್ ನಡೆಸಿದ್ರೆ ಏಕದಿನದಲ್ಲೇ 75-80 ಶತಕ ಸಿಡಿಸ್ತಾರೆ ಎಂದು ಟೀಂ ಇಂಡಿಯಾ ಮಾಜಿ ಪ್ಲೇಯರ್ ವಾಸಿಂ ಜಾಫರ್ ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯಗಳನ್ನಾಡಿರುವ ವಾಸೀಂ ಜಾಫರ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದು, 11 ಇನ್ನಿಂಗ್ಸ್ಗಳಾದ ಬಳಿಕ ವಿರಾಟ್ ಮತ್ತೊಂದು ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು, ನನ್ನ ಪ್ರಕಾರ ಅವರು 75-80 ಶತಕ ಸಿಡಿಸುತ್ತಾರೆ ಎಂದು ಹೇಳಿದ್ದಾರೆ.