ಗುವಾಹಟಿ:ಶ್ರೀಲಂಕಾ ವಿರುದ್ಧ ಜನವರಿ 5ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜುಗೊಂಡಿದ್ದು, ಈಗಾಗಲೇ ಗುವಾಹಟಿಯಲ್ಲಿ ಅಭ್ಯಾಸ ಶುರು ಮಾಡಿದೆ.
ಇದರ ಮಧ್ಯೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೊಸ ಹೇರ್ಸ್ಟೈಲ್ನೊಂದಿಗೆ ಮೈದಾನಕ್ಕಿಳಿಯಲು ಸಜ್ಜುಗೊಂಡಿದ್ದಾರೆ. ಹೇರ್ಸ್ಟೈಲಿಸ್ಟ್ ಅಲಿಮ್ ಹಕ್ಕಿಂ ಅವರು ಕೊಹ್ಲಿಯ ನ್ಯೂ ಹೇರ್ಸ್ಟೈಲ್ನ ಕೆಲವೊಂದು ಪೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗಾಗಲೇ ಗುವಾಹಟಿ ಕ್ರಿಕೆಟ್ ಮೈದಾನಕ್ಕೆ ಬಂದಿಳಿದಿರುವ ಟೀಂ ಇಂಡಿಯಾ ಜನವರಿ 5ರಿಂದ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದೆ.