ಕರ್ನಾಟಕ

karnataka

ETV Bharat / sports

ಭಾರತೀಯ ನಾಯಕನ ಮೇಲೆ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ - ಲೋದಾ ಸಮಿತಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್​ಸಿಎ ಮುಖ್ಯಸ್ಥ ದ್ರಾವಿಡ್​ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಅನೇಕ ಹುದ್ದೆಗಳನ್ನು ಹೊಂದಿದ್ದರಿಂದ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದೆ. ಇದೀಗ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿ ಸಂಜೀವ್​ ಗುಪ್ತಾ ಸುಪ್ರಿಂಕೋರ್ಟ್​ ನೇಮಿಸಿರುವ ಬಿಸಿಸಿಐ ಎಥಿಕ್ಸ್​ ಆಫೀಸರ್​ ಡಿ.ಕೆ.ಜೈನ್​ ಅವರಿಗೆ ಪತ್ರ ಬರೆದಿದ್ದಾರೆ.

Virat Kohli under conflict scanner,
ಭಾರತೀಯ ನಾಯಕ ಮೇಲೆ ಹಿತಾಸಕ್ತಿ ಸಂಘರ್ಷದ ದೂರು

By

Published : Jul 5, 2020, 2:37 PM IST

ಮುಂಬೈ: ಬಿಸಿಸಿಐ ನಿಯಮ 38 (4) ರ ಅಡಿಯಲ್ಲಿ 'ಹಿತಾಸಕ್ತಿ ಸಂಘರ್ಷ(ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್)' ಷರತ್ತನ್ನು ಉಲ್ಲಂಘಿಸಿರುವ ಆರೋಪ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕೇಳಿಬಂದಿದೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಂವಿಧಾನವನ್ನು ಪುನರ್​ ನಿರ್ಮಾಣ ಮಾಡುವಾಗ ಲೋಧಾ ಸಮಿತಿ ಜಂಟಲ್​ಮ್ಯಾನ್​ ಆಟದಲ್ಲಿ ಹಿತಾಸಕ್ತಿ ಸಂಘರ್ಷ ವಿಚಾರವಾಗಿ ಉತ್ತಮ ಆಡಳಿತ ಪಡೆಯಲು ತೀವ್ರವಾಗಿ ಹೋರಾಡಬೇಕಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.

ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್​ಸಿಎ ಮುಖ್ಯಸ್ಥ ದ್ರಾವಿಡ್​ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಅನೇಕ ಹುದ್ದೆಗಳನ್ನು ಹೊಂದಿದ್ದರಿಂದ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದೆ. ಇದೀಗ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿ ಸಂಜೀವ್​ ಗುಪ್ತಾ ಸುಪ್ರಿಂ ಕೋರ್ಟ್​ ನೇಮಿಸಿರುವ ಬಿಸಿಸಿಐ ಎಥಿಕ್ಸ್​ ಆಫೀಸರ್​ ಡಿ.ಕೆ ಜೈನ್​ ಅವರಿಗೆ ಪತ್ರ ಬರೆದಿದ್ದಾರೆ.

ಗುಪ್ತಾರ ಇ-ಮೇಲ್​ನಲ್ಲಿ, ಕೊಹ್ಲಿ ಹೊಂದಿರುವ ವ್ಯವಹಾರಗಳ ಬಗ್ಗೆ ಮಾತನಾಡಿದ್ದು, ಇದು ಬಿಸಿಸಿಐ ಸಂವಿಧಾನದಲ್ಲಿ ನೋಂದಾಯಿಸಿರುವ, ಸುಪ್ರೀಂಕೋರ್ಟ್​ ಅಂಗೀಕರಿಸಿದ ಲೋಧಾ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿರಾಟ್​ ಕೊಹ್ಲಿ

ಮಧ್ಯಪ್ರದೇಶ ಕ್ರಿಕೆಟ್​ ಅಸೋಸಿಯೇಸನ್​ನ ಖಾಯಂ ಸದಸ್ಯ ಸಂಜೀವ್​ ಗುಪ್ತಾ ಪ್ರಕಾರ, ವಿರಾಟ್​ ಕೊಹ್ಲಿ, ಭಾರತ ತಂಡದ ಆಟಗಾರ ಮತ್ತು ನಾಯಕನಾಗಿ ಒಂದು ಹುದ್ದೆಯನ್ನು ಹೊಂದಿರುವುದರ ಜೊತೆಗೆ ಸ್ಪೋರ್ಟ್ಸ್​ ಮಾರ್ಕೆಟಿಂಗ್​ ಕಂಪನಿಯ ಡೈರೆಕ್ಟರ್​ ಹುದ್ದೆಗಳನ್ನು ಹೊಂದಿರುವುದು ಬಿಸಿಸಿಐ ನಿಯಮ 38(4) ಅನ್ನು ಉಲ್ಲಂಘನೆಯಾಗಿದೆ ಎಂದು ಗುರುತಿಸಿ ಆರೋಪಿಸಿದ್ದಾರೆ.

ಕೊಹ್ಲಿ, ವಿರಾಟ್​ ಕೊಹ್ಲಿ ಸ್ಪೋರ್ಟ್ಸ್​ ಎಲ್​ಎಲ್​ಪಿಯಲ್ಲೂ ನಿರ್ದೇಶಕ ಹುದ್ದೆಯನ್ನು ಪಡೆದಿದ್ದಾರೆ. ಮತ್ತು ಕಾರ್ನರ್​ಸ್ಟೋನ್​ ವೇಂಚರ್ಸ್​ ಪಾರ್ಟರ್ನ್ಸ್​ ಎಲ್ಎಲ್​ಪಿಯ ಮೂರು ನಿರ್ದೇಶಕರಲ್ಲಿ ಕೊಹ್ಲಿಯೂ ಒಬ್ಬರಾಗಿದ್ದಾರೆ.

ದಿನಾಂಕ 21.08.18ರ ನಿಯಮ 38(4)(ಅಪೆಕ್ಸ್ ನ್ಯಾಯಾಲಯದಿಂದ ಅನುಮೋದನೆ) ಬಿಸಿಸಿಐ ಸಂವಿಧಾನದ ಅನುಸಾರವಾಗಿ, ವಿರಾಟ್​ ಕೊಹ್ಲಿ ಅವರಿಗೆ ಯಾವುದಾದರು ಒಂದು ಹುದ್ದೆಯನ್ನು ನೀಡುವಂತೆ ನಿರ್ದೇಶಿಸಿದ ಆದೇಶವನ್ನು ಕೂಡಲೇ ಅಂಗೀರಿಸಬೇಕು ಎಂದು ಎಥಿಕ್ಸ್​ ಅಫೀಸರ್​ಗೆ ವಿನಮ್ರವಾಗಿ ಕೋರುತ್ತೇನೆ ಎಂದು ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details