ಮುಂಬೈ: ಕ್ರಿಕೆಟ್ ಜಗತ್ತಿನ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್ಮನ್, ರನ್ಮಷಿನ್ , ಕಿಂಗ್ ಕೊಹ್ಲಿ ಎಂದೆಲ್ಲಾ ಕರೆಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಾವೂ ಸೀಮಿತ ಕ್ರಿಕೆಟ್ನ ನಾಯಕತ್ವ ವಹಿಸಿಕೊಂಡ ನಂತರ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 8000 ಕ್ಕೂ ಹೆಚ್ಚುರನ್ಗಳಿಸಿದ್ದಾರೆ.
ದೇಶ-ವಿದೇಶಗಳಲ್ಲಿ ಯಾವುದೇ ತಂಡದ ವಿರುದ್ಧವಾದರೂ ಮುಲಾಜಿಲ್ಲದೆ ರನ್ಬಾರಿಸುವ ಕೊಹ್ಲಿ ಕಳೆದ 4 ವರ್ಷಗಳಲ್ಲಿ 63.17 ಸರಾಸರಿಯಲ್ಲಿ 8465 ರನ್ಗಳಿಸಿದ್ದಾರೆ. ಕೊಹ್ಲಿಯನ್ನು ಬಿಟ್ಟರೆ ಭಾರತದವರೇ ಆದ ರೋಹಿತ್ ಶರ್ಮಾ 6350ರನ್ಗಳಿಸಿ ಎರಡನೇ ಸ್ಥಾನದಲ್ಲದ್ದಾರೆ. ರನ್ ಮಷಿನ್ ಕೊಹ್ಲಿ ಎರಡನೇ ಸ್ಥಾನದಲ್ಲಿರುವ ರೋಹಿತ್ಗಿಂತ 2115ರನ್ ಮುಂದಿದ್ದಾರೆ.
ಐಸಿಸಿ ಶೇರ್ ಮಾಡಿರುವ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಇದ್ದು ಅವರು 48.08 ಸರಾಸರಿಯಲ್ಲಿ 6203 ರನ್ಗಳಿಸಿದ್ದರೆ, ಪಾಕಿಸ್ತಾನದ ಬಾಬರ್ ಅಜಮ್ 51.30 ಸರಾಸರಿಯಲ್ಲಿ 5387 ರನ್ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.ನ್ಯೂಜಿಲ್ಯಾಂಡ್ನ ಅನುಭವಿ ಬ್ಯಾಟ್ಸ್ಮನ್ 51.07ರ ಸರಾಸರಿಯಲ್ಲಿ 4801 ರನ್ಗಳಿಸಿ 5 ನೇಸ್ಥಾನ ಪಡೆದಿದ್ದಾರೆ.
ಸಚಿನ್ ದಾಖಲೆಯ ಬೆನ್ನತ್ತಿರುವ ವಿರಾಟ್ ಕೊಹ್ಲಿ ಈಗಾಗಲೆ ಏಕದಿನ ಕ್ರಿಕೆಟ್ನಲ್ಲಿ 11867, ಟೆಸ್ಟ್ನಲ್ಲಿ 7240 ಹಾಗೂ ಟಿ20 ಕ್ರಿಕೆಟ್ನಲ್ಲಿ2794 ರನ್ಗಳಿಸಿದ್ದಾರೆ. ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 70 ಶತಕಗಳಿಸಿದ್ದಾರೆ 104 ಅರ್ಧಶತಕ ಸಿಡಿಸಿ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನ ಅತ್ಯುತ್ತಮ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.