ಹೈದರಾಬಾದ್: ವಿಂಡೀಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 208 ರನ್ಗಳ ಬೃಹತ್ ಟಾರ್ಗೇಟ್ ಅನ್ನು ರಾಹುಲ್ ಹಾಗೂ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ನಾಯಕನ ಆಟ ಪ್ರದರ್ಶನ ನೀಡಿದ ವಿರಾಟ್ ಕೇವಲ 50 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್ಗಳ ಸಹಿತ ಔಟಾಗದೆ 94 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
ವಿಂಡೀಸ್ ತಂಡದ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಭಾರತ 2017ರಲ್ಲಿ ವಿಂಡೀಸ್ ಪ್ರವಾಸ ಕೈಗೊಂಡಿದ್ದ ವೇಳೆ ಜಮೈಕಾದಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದು ಅವರ ಸಿಗ್ನೇಚರ್ ಸೆಲೆಬ್ರೇಷನ್ ಮೂಲಕ ಮೈದಾನದಲ್ಲಿ ಸಂಭ್ರಮಿಸಿದ್ದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಕೊಹ್ಲಿ ವಿಲಿಯಮ್ಸ್ ಎಸೆದ 16 ನೇ ಓವರ್ನಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಅವರಂತೆಯೇ ಜೇಬಿನಿಂದ ನೋಟ್ಬುಕ್ ತೆಗೆದು ಸಿಗ್ನೇಚರ್ ಮಾಡುವಂತೆ ನಟಿಸಿ ವಿಲಿಯಮ್ಸ್ಗೆ ಸಕತ್ತಾಗೇ ತಿರುಗೇಟು ನೀಡಿದರು. ಕೊಹ್ಲಿ ರಿವೇಂಜ್ ಸದ್ಯ ಇಂಟರ್ನೆಟ್ನಲ್ಲಿ ಹವಾ ಸೃಷ್ಠಿಸಿದ್ದು ಅಭಿಮಾನಿಗಳು ಕೊಹ್ಲಿ ಕೆಣಕಿದರೆ ಇದೇ ರೀತಿ ಅನುಭವಿಸಬೇಕಾಗುತ್ತದ ಎನ್ನುತ್ತಿದ್ದಾರೆ.