ಕರ್ನಾಟಕ

karnataka

ETV Bharat / sports

ಕೆ.ಎಲ್.ರಾಹುಲ್​ ವಿಕೆಟ್​ ಕೀಪರ್​ ಆದ್ರೆ ತಂಡದ ಬಲ ಹೆಚ್ಚಲಿದೆ: ಕೊಹ್ಲಿ ವಿಶ್ವಾಸ - ರಾಹುಲ್​ ವಿಕೆಟ್ ಕೀಪಿಂಗ್​

ರಾಹುಲ್​ ವಿಕೆಟ್​ ಕೀಪಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಿಂದ ತಂಡಕ್ಕೆ ಮತ್ತೊಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ನನ್ನು ಆಯ್ಕೆ ಮಾಡಿಕೊಳ್ಳಲು ಅವರು ದಾರಿ ಮಾಡಿಕೊಟ್ಟಿದ್ದಾರೆ ಎಂದು ಕೊಹ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ- ಕೆಎಲ್​ ರಾಹುಲ್
ವಿರಾಟ್​ ಕೊಹ್ಲಿ- ಕೆಎಲ್​ ರಾಹುಲ್

By

Published : Jan 23, 2020, 3:13 PM IST

Updated : Jan 23, 2020, 3:18 PM IST

ಆಕ್ಲೆಂಡ್​: ಕೆ.ಎಲ್.ರಾಹುಲ್ ವಿಕೆಟ್​ ಕೀಪರ್​ ಕಾರ್ಯನಿರ್ವಹಿಸಿದರೆ ತಂಡ ಸಮತೋಲನದಲ್ಲಿರಲು ಸಹಾಯವಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಆರಂಭಿಕನಾಗಿ ಉತ್ತಮ ಬ್ಯಾಟಿಂಗ್​ ನಡೆಸಿದ್ದ ಕೆ.ಎಲ್.ರಾಹುಲ್​ ಇದೀಗ ಮಧ್ಯಮ ಕ್ರಮಾಂದಲ್ಲೂ ಬ್ಯಾಟಿಂಗ್ ಜೊತೆಗೆ​ ವಿಕೆಟ್​ ಕೀಪಿಂಗ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತಮ್ಮ ಸಾಮರ್ಥ್ಯ ತೋರಿಸಿಕೊಂಡಿದ್ದಾರೆ. ಆದ್ದರಿಂದಲೇ ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯದಲ್ಲಿ ರಿಷಭ್​ ಪಂತ್​ ಫಿಟ್​ ಆಗಿದ್ದರೂ ರಾಹುಲ್​ರನ್ನೇ ವಿಕೆಟ್​ ಕೀಪರ್​ ಆಗಿ ಆಯ್ಕೆ ಮಾಡಲಾಗಿತ್ತು.

"ರಾಹುಲ್​ ವಿಕೆಟ್​ ಕೀಪಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಿಂದ ತಂಡಕ್ಕೆ ಮತ್ತೊಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ನನ್ನು ಆಯ್ಕೆ ಮಾಡಿಕೊಳ್ಳಲು ಅವರು ದಾರಿ ಮಾಡಿಕೊಟ್ಟಿದ್ದಾರೆ" ಎಂದು ಕೊಹ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಧವನ್​ ಗಾಯಗೊಂಡಿರುವುದರಿಂದ ಏಕದಿನ ಕ್ರಿಕೆಟ್​ನಲ್ಲಿ ರಾಹುಲ್​ರನ್ನು ವಿಕೆಟ್​ ಕೀಪರ್​ ಆಗಿ ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಯೋಜನೆಯಲ್ಲಿದ್ದೇವೆ. ಧವನ್​ ಸ್ಥಾನದಲ್ಲಿ ಬೇರೊಬ್ಬ ಬ್ಯಾಟ್ಸ್​ಮನ್​ ಆಡಿಸಿ, ರಾಹುಲ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಅವರಿಷ್ಟದಂತೆ ಆಡಲು ಅವಕಾಶ ಕಲ್ಪಿಸಿಕೊಡಲು ಚಿಂತಿಸಿದ್ದೇವೆ. ಇದರಿಂದ ತಂಡಕ್ಕೆ ಒಬ್ಬ ಬ್ಯಾಟ್ಸ್​ಮನ್​ ಹೆಚ್ಚಾಗಲಿದ್ದಾರೆ. ಆದರೆ ಟಿ-20ಯಲ್ಲಿ ಮಾತ್ರ ರಾಹುಲ್​ರನ್ನು ವಿಕೆಟ್​ ಕೀಪಿಂಗ್​ ಮಾಡಿದರೂ ಆರಂಭಿಕರನ್ನಾಗಿ ಕಣಕ್ಕಿಳಿಸಲಿದ್ದೇವೆ. ಏಕೆಂದರೆ ನಮ್ಮ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಡೈನಾಮಿಕ್​ ಬ್ಯಾಟ್ಸ್​ಮನ್​ಗಳಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

ರಾಹುಲ್​ ವಿಕೆಟ್​ ಕೀಪಿಂಗ್​ ಜೊತೆ ಬ್ಯಾಟಿಂಗ್​ ಮಾಡಿದರೆ ಅವರನ್ನು ತಂಡ ಮುಂದುವರಿಸಲಿದೆ. ಇದರಿಂದ ತಂಡದ ಸಮತೋಲನ ಕೂಡಾ ಆಗಲಿದೆ. ನಾವೂ ಕೂಡಾ ತುಂಬಾ ಸಮಯದಿಂದ ಈ ರೀತಿಯ ಆಟಗಾರನನ್ನು ಎದುರು ನೋಡುತ್ತಿದ್ದೆವು ಎಂದು ಕೊಹ್ಲಿ ರಾಹುಲ್​ ಬಗ್ಗೆ ಗುಣಗಾನ ಮಾಡಿದ್ದಾರೆ.

Last Updated : Jan 23, 2020, 3:18 PM IST

ABOUT THE AUTHOR

...view details