ಕರ್ನಾಟಕ

karnataka

ETV Bharat / sports

ರೋಹಿತ್​ ಖಂಡಿತ ಮತ್ತೊಬ್ಬ ಸೆಹ್ವಾಗ್​ ಆಗ್ತಾರೆ, ಆ ತಾಕತ್ತು ಅವರಲ್ಲಿದೆ.. ಸ್ನೇಹಿತನ ಬೆನ್ನಿಗೆ ನಿಂತ ಕೊಹ್ಲಿ - undefined

ಸ್ಫೋಟಕ ಆಟಕ್ಕೆ ಹೆಸರಾಗಿದ್ದ ವಿರೇಂದ್ರ ಸೆಹ್ವಾಗ್​ರಂತೆ ರೋಹಿತ್ ಶರ್ಮಾ​ರಿಂದಲೇ ಅದೇ ರೀತಿಯ ಆಟ ನೋಡಲು ಬಯಸುತ್ತಿದ್ದೇವೆ. ಅವರು ತಮ್ಮ ನೈಜ ಆಟವನ್ನು ಕಂಡುಕೊಂಡರೆ ಇಡೀ ಪಂದ್ಯವನ್ನೇ ಮುಂದಕ್ಕೆ ನಡೆಸಿಕೊಂಡು ಹೋಗಲಿದ್ದಾರೆ. ಈ ರೀತಿಯ ಆಟವನ್ನು ನಾವು ಹಲವಾರು ವರ್ಷಗಳ ಕಾಲ ಸೆಹ್ವಾಗ್​ರಿಂದ ಕಂಡಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.

Virat Kohli-rohit

By

Published : Oct 1, 2019, 6:01 PM IST

ವಿಶಾಖಪಟ್ಟಣ: ಭಾರತ ತಂಡದ ಸೀಮಿತ ಓವರ್​ಗಳಲ್ಲಿ ಭರ್ಜರಿ ಆಟ ಪ್ರದರ್ಶಿಸಿರುವ ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ಅವರನ್ನು ಸ್ಫೋಟಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್​ರಿಗೆ ಹೋಲಿಸಲಾಗುತ್ತಿದೆ.

ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಬುಧವಾರದಿಂದ ಮೊದಲ ಟೆಸ್ಟ್​ ಆರಂಭವಾಗಿದೆ. ಈ ಸರಣಿಯ ಎಲ್ಲಾ ಪಂದ್ಯಗಳಿಗೂ ಹಿಟ್​​ಮ್ಯಾನ್​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಆಯ್ಕೆ ಸಮಿತಿ ಗ್ರೀನ್​ ಸಿಗ್ನಲ್​ ನೀಡಿದೆ. ಇದೀಗ ಕೊಹ್ಲಿ ಸಹಾ ರೋಹಿತ್​ ಶರ್ಮಾ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಆರಂಭಿಕನಾಗಿ ಸ್ಥಿರತೆ ಕಾಪಾಡಿಕೊಳ್ಳುವವರೆಗೂ ನಾವು ಅವರಿಗೆ ಹೆಚ್ಚು ಒತ್ತಡ ಹೇರುವುದಿಲ್ಲ. ಅವರ ಸ್ವಾಭಾವಿಕ ಆಟ ಆಡಲು ಅವಕಾಶ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ರೋಹಿತ್​ರಿಂದ ಅತಿಯಾದ ನಿರೀಕ್ಷೆ ಮಾಡುತ್ತಿಲ್ಲ. ಇಡೀ ತಂಡ ಅವರ ಸ್ವಾಭಾವಿಕ ಆಟ ನೋಡಲು ಕಾಯುತ್ತಿದೆ. 6 ರಿಂದ 7 ಟೆಸ್ಟ್​ಗಳಲ್ಲಿ ಅವರಿಗೆ ಆರಂಭಿಕರಾಗಿ ಸ್ಥಿರತೆ ಕಾಯ್ದುಕೊಳ್ಳಲು ಅವಕಾಶ ನೀಡಲು ಟೀಂ​ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ರೋಹಿತ್​ ಆರಂಭಿಕರಾಗಿ ಅವರಿಗಿಷ್ಟ ಬಂದಂತೆ ಆಡಲು ಸ್ವಾತಂತ್ರ್ಯ ನೀಡಲಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ನಾವು ರೋಹಿತ್​ರಿಂದ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ವಿರೇಂದ್ರ ಸೆಹ್ವಾಗ್​ರ ಆಟ ನೋಡಲು ಬಯಸುತ್ತಿದ್ದೇವೆ. ಅವರು ತಮ್ಮ ನೈಜ ಆಟವನ್ನು ಕಂಡುಕೊಂಡರೆ ಇಡೀ ಪಂದ್ಯವನ್ನೇ ಮುಂದಕ್ಕೆ ನಡೆಸಿಕೊಂಡು ಹೋಗಲಿದ್ದಾರೆ. ಈ ರೀತಿಯ ಆಟವನ್ನು ನಾವು ಹಲವಾರು ವರ್ಷಗಳ ಕಾಲ ಸೆಹ್ವಾಗ್​ರಿಂದ ಕಂಡಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಸೆಹ್ವಾಗ್​ಗೆ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸುವಂತೆ ಹೇಳಿದರೆ ಸಾಕು ಅವರು ಲಂಚ್​ಬ್ರೇಕ್​ಗೂ ಮೊದಲೇ ಶತಕ ಬಾರಿಸುತ್ತಿದ್ದರು. ಬೌಲರ್​ಗಳನ್ನು ತಮ್ಮಿಚ್ಛೆಯಂತೆ ದಂಡಿಸುತ್ತಿದ್ದ ಸೆಹ್ವಾಗ್​ರಲ್ಲಿದ್ದ ಗುಣ ರೋಹಿತ್​ರವರಲ್ಲೂ ಇದೆ. ಆದರೆ, ತಕ್ಷಣ ಅಂತಹ ಆಟ ನೋಡಲು ಸಾಧ್ಯವಾಗದಿದ್ದರೂ ಮುಂದಿನ ದಿನ ಖಂಡಿತ ಶಾಧ್ಯವಾಗಲಿದೆ. ಸದ್ಯಕ್ಕೆ ರೋಹಿತ್​ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ಪಡೆದಿರುವುದರಿಂದ ಅವರಿಗೆ ಬೇಕಾದಷ್ಟು ಸಮಯ ನೀಡುವುದು ಅಗತ್ಯವಾಗಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details