ಕರ್ನಾಟಕ

karnataka

ETV Bharat / sports

ಜಸ್ಟ್ ಒಂದು ಸಿಕ್ಸರ್ ಸಿಡಿಸಿದರೆ ವಿರಾಟ್ ಕೊಹ್ಲಿ ಪಾಲಾಗಲಿದೆ ವಿಶೇಷ ದಾಖಲೆ..! - ವಿರಾಟ್ ಕೊಹ್ಲಿ ಟಿ20 ರೆಕಾರ್ಡ್​

ಈಗಾಗಲೇ ಭಾರತದ ಪರ ಅತಿ ಹೆಚ್ಚು ಟಿ-20 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ(2,563) ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

Virat Kohli six runs away from achieving big record in T20Is
ವಿರಾಟ್ ಕೊಹ್ಲಿ

By

Published : Dec 11, 2019, 11:42 AM IST

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ದಾಖಲೆ ನಿರ್ಮಾಣ ಮಾಡುತ್ತಿದ್ದು, ಇಂದು ನಡೆಯಲಿರುವ ಅಂತಿಮ ಟಿ-20 ಪಂದ್ಯದಲ್ಲೂ ವಿಶೇಷ ರೆಕಾರ್ಡ್​ ಬರೆಯಲು ಸಜ್ಜಾಗಿದ್ದಾರೆ.

ಭಾರತದ ನೆಲದಲ್ಲಿ 1000 ಟಿ-20 ರನ್ ಪೂರೈಸಲು ವಿರಾಟ್ ಕೊಹ್ಲಿ ಇನ್ನು ಕೇವಲ ಆರು ರನ್ ಅವಶ್ಯಕತೆ ಇದೆ. ಇಂದಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗೋದು ಬಹುತೇಕ ನಿಚ್ಚಳವಾಗಿದೆ.

ವಾಂಖೆಡೆಯಲ್ಲಿ ನಿರ್ಣಾಯಕ ಸಮರ... ಸರಣಿ ಗೆಲುವಿಗೆ ಉಭಯ ತಂಡಗಳ ಫೈನಲ್​​​ ಫೈಟ್​​​

ಈಗಾಗಲೇ ಭಾರತದ ಪರ ಅತಿ ಹೆಚ್ಚು ಟಿ-20 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ(2,563) ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದರು.

ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದು ನಿರ್ಣಾಯಕ ಟಿ-20 ಪಂದ್ಯ ನಡೆಯುತ್ತಿದ್ದು, ಸರಣಿ ಗೆಲುವಿನ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

ABOUT THE AUTHOR

...view details