ಕರ್ನಾಟಕ

karnataka

ETV Bharat / sports

2ನೇ ಟೆಸ್ಟ್​ ಶುರುವಿನಲ್ಲಿ ಗಂಗೂಲಿ, ಗವಾಸ್ಕರ್​ ರೆಕಾರ್ಡ್​​ ಬ್ರೇಕ್​ ಮಾಡಿದ ವಿರಾಟ್​..! - ವಿರಾಟ್​ ಕೊಹ್ಲಿ

ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ನಾಯಕ ವಿರಾಟ್​ ಕೊಹ್ಲಿ 50 ಟೆಸ್ಟ್​ ಮ್ಯಾಚ್​ಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಇಷ್ಟೊಂದು ಟೆಸ್ಟ್​ಗಳಲ್ಲಿ ನಾಯಕತ್ವ ವಹಿಸಿದ 2ನೇ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 10, 2019, 10:27 AM IST

ಪುಣೆ:ನಾಯಕ ವಿರಾಟ್​ ಕೊಹ್ಲಿ ಪುಣೆಯಲ್ಲಿ 50 ಟೆಸ್ಟ್​ ಮ್ಯಾಚ್​ಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಇಷ್ಟೊಂದು ಟೆಸ್ಟ್​ಗಳಲ್ಲಿ ನಾಯಕತ್ವ ವಹಿಸಿದ 2ನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಗಂಗೂಲಿ ಅವರನ್ನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿದ್ದಾರೆ.

60 ಟೆಸ್ಟ್​ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಎಂ ಎಸ್​ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. 49 ಟೆಸ್ಟ್​ ಮ್ಯಾಚ್​ಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಗಂಗೂಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

30 ವರ್ಷದ ವಿರಾಟ್​ ಕೊಹ್ಲಿ ನಾಯಕತ್ವ ವಹಿಸಿಕೊಂಡ 49 ಟೆಸ್ಟ್​ ಪಂದ್ಯಗಳಲ್ಲಿ 27 ಗೆಲುವು ಸಾಧಿಸಿದ್ದಾರೆ. ಧೋನಿ 60 ಟೆಸ್ಟ್​ ಪಂದ್ಯಗಳಲ್ಲಿ ಅಷ್ಟೇ ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದ್ದಾರೆ.ಇನ್ನು ನಾಯಕತ್ವ ವಹಿಸಿದ 50ನೇ ಪಂದ್ಯದಲ್ಲಿ ಕೊಹ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

ಅತಿಹೆಚ್ಚು​ ಟೆಸ್ಟ್​ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದವರು
ಎಂ.ಎಸ್​ ಧೋನಿ- 60
ವಿರಾಟ್​ ಕೊಹ್ಲಿ- 50
ಸೌರವ್​ ಗಂಗೂಲಿ- 49
ಸುನಿಲ್​ ಗವಸ್ಕರ್​/ ಮೊಹಮ್ಮದ್ ಅಝುರುದ್ಧಿನ್​- 47
ಮನ್ಸೂರ್​ ಅಲಿಖಾನ್ ಪಟೌಡಿ- 40

ABOUT THE AUTHOR

...view details