ಪುಣೆ:ದ.ಅಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ದಿನದಾಟದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕದ ಬರ ನೀಗಿಸಿದ್ದಾರೆ.
ಮೊದಲನೇ ದಿನದಾಟದ ಅಂತ್ಯಕ್ಕೆ 63 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದ ಡೆಲ್ಲಿ ಡ್ಯಾಷರ್, ಇಂದು ಮುಂಜಾನೆಯ ಅಟದಲ್ಲಿ ನಿಧಾನವಾಗಿ ರನ್ ಪೇರಿಸುತ್ತಾ ಶತಕ ಸಾಧನೆ ಮಾಡಿದ್ದಾರೆ.
2ನೇ ಟೆಸ್ಟ್ ಶುರುವಿನಲ್ಲಿ ಗಂಗೂಲಿ, ಗವಾಸ್ಕರ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್..!
173 ಎಸೆತದಲ್ಲಿ ಶತಕ ದಾಖಲಿಸಿದ ಕೊಹ್ಲಿ ಇನ್ನಿಂಗ್ಸ್ನಲ್ಲಿ 16 ಬೌಂಡರಿ ಸೇರಿದ್ದವು. ಇಂದಿನ ಶತಕದ ಮೂಲಕ ಕೊಹ್ಲಿ ಟೆಸ್ಟ್ ಶತಕದ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದು ಕೊಹ್ಲಿಯ ಈ ವರ್ಷದ ಮೊದಲ ಟೆಸ್ಟ್ ಶತಕವೂ ಹೌದು.
ಹತ್ತು ಇನ್ನಿಂಗ್ಸ್ ಬಳಿಕ ಶತಕ ಸಾಧನೆ:
ಸದಾ ಫಾರ್ಮ್ನಲ್ಲೇ ಇರುವ ವಿಶ್ವದ ಕೆಲವೇ ಬ್ಯಾಟ್ಸ್ಮನ್ಗಳಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರು. ಆದರೆ ಕೊಹ್ಲಿ ಟೆಸ್ಟ್ ನಲ್ಲಿ ಶತಕ ಗಳಿಸದೆ ಹತ್ತು ಇನ್ನಿಂಗ್ಸ್ ಆಗಿತ್ತು.
ಮಹಾರಾಷ್ಟ್ರ ಕ್ರಿಕೆಸ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೂರಂಕಿ ಗಡಿ ದಾಟಿ ಕೊಹ್ಲಿ ಹತ್ತು ಇನ್ನಿಂಗ್ಸ್ ಬಳಿಕ ತಮ್ಮ ರನ್ ದಾಹ ತೀರಿಸಿಕೊಂಡಿದ್ದಾರೆ.