ದುಬೈ: ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಐದು ತಿಂಗಳ ನಂತರ ಕ್ರಿಕೆಟ್ಗ ಮರಳುತ್ತಿರುವುದರಿಂದ ಆವೇಗವನ್ನು ಮರಳಿ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಮತೋಲಿತ ರೀತಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಕೋವಿಡ್ 19 ಬಿಕ್ಕಟ್ಟಿನಿಂದ 13ನೇ ಆವೃತ್ತಿ ಐಪಿಎಲ್ ಭಾರತದಿಂದ ಯುಎಇಗೆ ವರ್ಗಾಯಿಸಲಾಗಿದೆ. ಸೆಪ್ಟೆಂಬರ್ 19ರಿಂದ 2020ರ ಐಪಿಎಲ್ ಆರಂಭವಾಗಲಿದೆ. ಎಲ್ಲಾ ತಂಡಗಳು ಒಂದು ತಿಂಗಳ ಮುಂಚೆಯೇ ದುಬೈಗೆ ತೆರಳಿದ್ದು, ಅಲ್ಲಿ ತರಬೇತಿ ಆರಂಭಿಸಿವೆ.
ಕೆಲವು ತಿಂಗಳ ನಂತರ ತರಬೇತಿ ನಡೆಸಿದ್ದರಿಂದ ಕೆಲವರಿಗೆ ಭುಜದ ನೋವು ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ತಂಡದ ಸದಸ್ಯರಿಗೆ ತಾವೂ ಬಯಸುವ ಮಟ್ಟಕ್ಕೆ ಮರಳುತ್ತಿದ್ದೇವೆ ಎಂಬುದು ಅರಿವಾಗುತ್ತಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.