ಧರ್ಮಶಾಲ: ಭಾರತ ಸೀಮಿತ ಓವರ್ಗಳ ತಂಡದ ನಾಯಕ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಪಾಲಿಗೆ ಈ ಸರಣಿ ಮಹತ್ವದ್ದಾಗಿದ್ದು, ಇಬ್ಬರು ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರಾಗಲು ಪೈಪೋಟಿ ನಡೆಸಲಿದ್ದಾರೆ.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪ್ರಸ್ತುತ ಟಿ20 ಕ್ರಿಕೆಟ್ನ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 88 ಇನ್ನಿಂಗ್ಸ್ಗಳಲ್ಲಿ 2422 ರನ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ 65 ಇನ್ನಿಂಗ್ಸ್ಗಳಲ್ಲಿ 2369 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಇಂದಿನ ಪಂದ್ಯದಲ್ಲಿ ಕೊಹ್ಲಿ 54 ರನ್ ಗಳಿಸಿದರೆ ರೋಹಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.