ಮುಂಬೈ: ಟಿ-20 ಮಾದರಿಯಲ್ಲಿ ಭಾರತದ ಅಗ್ರಗಣ್ಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಟ್ಟಾರೆ ರನ್ ಗಳಿಕೆ ವಿಚಾರದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು.
ಬುಧವಾರ ವಿಂಡೀಸ್ ವಿರುದ್ಧದ ಅಂತಿಮ ಟಿ-20 ಪಂದ್ಯದೊಂದಿಗೆ ಈ ವರ್ಷ ಭಾರತದ ಟಿ-20 ಪಂದ್ಯಗಳು ಮುಕ್ತಾಯವಾಗಿವೆ. ಭಾರತದ ಪರ ಅತಿ ಹೆಚ್ಚು ಟಿ-20 ರನ್ ಗಳಿಸುವ ವಿಚಾರದಲ್ಲಿ ಕೊಹ್ಲಿ ಹಾಗೂ ರೋಹಿತ್ ಕಳೆದ ಕೆಲ ತಿಂಗಳಿನಿಂದ ಭಾರಿ ಪೈಪೋಟಿಗಿಳಿದಿದ್ದರು. ಪಂದ್ಯದಿಂದ ಪಂದ್ಯಕ್ಕೆ ಏರಿಳಿತ ಕಾಣುತ್ತಿದ್ದ ಭಾರತದ ಈ ಅಗ್ರ ಕ್ರಮಾಂಕದ ದಾಂಡಿಗರು ಸದ್ಯ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ದ್ವಿತೀಯ ಟಿ-20 ಪಂದ್ಯದಲ್ಲಿ ಒಂದು ರನ್ ಮುಂದಿದ್ದ ಕೊಹ್ಲಿ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾಗಿಂತ ಒಂದು ರನ್ ಕಡಿಮೆ ಗಳಿಸುವ ಮೂಲಕ ಉಪ ನಾಯಕನೊಂದಿಗೆ ಜಂಟಿಯಾಗಿ ಮೊದಲ ಸ್ಥಾನ(2633 ರನ್) ಪಡೆದಿದ್ದಾರೆ.