ಗಯಾನ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ವಿಂಡೀಸ್ ಪರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರನ್ ಪೊಲಾರ್ಡ್ 58 ರನ್, ಪೋವೆಲ್ 32 ರನ್ ಗಳಿಸಿದ್ರೆ, ಪೂರನ್ 17 ರನ್ ಗಳಿಸಿದ್ರು.
ಪದಾರ್ಪಣೆ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದ ವೇಗಿ ದೀಪಕ್ ಚಹಾರ್ 3 ವಿಕೆಟ್ ಕಬಳಿಸಿದ್ರೆ, ನವ್ದೀಪ್ ಸೈನಿ 2, ರಾಹುಲ್ ಚಹಾರ್ 1 ವಿಕೆಟ್ ಪಡೆದು ವಿಂಡೀಸ್ ಆಟಗಾರ ರನ್ ವೇಗಕ್ಕೆ ಬ್ರೇಕ್ ಹಾಕಿದ್ರು.
147 ರನ್ಗಳ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಅನುಭವಿಸಿತು. 10 ಕಲೆಹಾಕುವಷ್ಟರಲ್ಲಿ 3 ರನ್ ಗಳಿಸಿದ್ದ ಶಿಖರ್ ಧವನ್, ಓಶಾನೆ ಥಾಮಸ್ಗೆ ವಿಕೆಟ್ ಒಪ್ಪಿಸಿದ್ರು. ಕೆ.ಎಲ್.ರಾಹುಲ್ ಕೂಡ 20 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ 106 ರನ್ಗಳ ಉತ್ತಮ ಜೊತೆಯಾಟವಾಡಿ ಟೀಂ ಇಂಡಿಯಾ ಗೆಲುವಿಗೆ ಆಸರೆಯಾದ್ರು. ಅಂತಿಮವಾಗಿ ಟೀಂ ಇಂಡಿಯಾ 19.1 ಓವರ್ಗಳಲ್ಲಿ 150 ರನ್ ಗಳಿಸಿ ಗೆಲುವು ದಾಖಲಿಸಿ ಟಿ-20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತು.
ಭಾರತ ತಂಡದ ಪರ ವಿರಾಟ್ 59 ರನ್ ಗಳಿಸಿದ್ರೆ, ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ ಪಂತ್ 42 ಎಸೆತಗಳಲ್ಲಿ 4 ಬೌಡರಿ, 4 ಸಿಕ್ಸರ್ಗಳ ನೆರವಿನಿಂದ 65 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ಓಶಾನೆ ಥಾಮಸ್ 2 ವಿಕೆಟ್ ಪಡೆದ್ರೆ, ಅಲೆನ್ 1 ವಿಕೆಟ್ ಪಡೆದಿದ್ದಾರೆ.