ಬೆಂಗಳೂರು: ರಾಯಲ್ ಚಾಲೇಂಜರ್ಸ್ ಬೆಂಗಳೂರು ಪ್ರಾಂಚೈಸಿ ದಿಢೀರ್ ಆಗಿ ತನ್ನ ಪ್ರೊಫೈಲ್ ಫೋಟೋ ತೆಗೆದು ಹಾಕುವ ಮೂಲಕ ಅಭಿಮಾನಿಗಳ ಜತೆಗೆ ಕ್ರಿಕೆಟ್ ಪ್ಲೇಯರ್ಸ್ಗೂ ಶಾಕ್ ಆಗಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 29ರಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ಪ್ರಾಂಚೈಸಿಗಳು ಸಖತ್ ಪ್ಲಾನ್ ರೂಪಿಸಿಕೊಂಡು ಮೈದಾನಕ್ಕಿಳಿಯಲು ಸಜ್ಜಾಗಿವೆ. ಇದರ ಮಧ್ಯೆ ಆರ್ಸಿಬಿ ತೆಗೆದುಕೊಂಡಿರುವ ನಿರ್ಧಾರ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.
ಆರ್ಸಿಬಿ ಇನ್ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ಫೇಸ್ಬುಕ್ನಲ್ಲಿ ಹಾಕಿದ್ದ ಎಲ್ಲ ಫೋಟೋ ತೆಗೆದುಹಾಕಿದ್ದು, ಇದಕ್ಕೆ ಪ್ಲೇಯರ್ಸ್ ಕೂಡ ಶಾಕ್ ಆಗಿದ್ದಾರೆ. ಇದೇ ವಿಷಯವಾಗಿ ಟ್ವೀಟ್ ಮಾಡಿದ್ದ ಚಹಾಲ್ 'ಅರೆ, ಇದೆಂಥಾ ಗೂಗ್ಲಿ ಆರ್ಸಿಬಿ, ನಿಮ್ಮ ಪ್ರೊಫೈಲ್ ಫೋಟೋ ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ಗಳೆಲ್ಲ ಎಲ್ಲಿ ಹೋದವು? ಎಂದು ಪ್ರಶ್ನೆ ಮಾಡಿದ್ದಾರೆ.
ಇದಾದ ಬಳಿಕ ಸ್ಟಾರ್ ಪ್ಲೇಯರ್ ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗೆ ಏನಾಯ್ತು, ಇದು ಕೇವಲ ವಿರಾಮ ಎಂದು ಭಾವಿಸುವೆ ಎಂದಿದ್ದಾರೆ. ಇದರ ಮಧ್ಯೆ ಕ್ಯಾಪ್ಟನ್ ಕೊಹ್ಲಿ ಟ್ವೀಟ್ ಮಾಡಿದ್ದು, "ತಂಡದ ನಾಯಕನಾಗಿ ನನಗೆ ಈ ಬಗ್ಗೆ ಏನೂ ಕೂಡ ತಿಳಿಸಲೇ ಇಲ್ಲವಲ್ಲ? ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದಿನಿಂದಲೂ ಆರ್ಸಿಬಿ ತನ್ನ ಹೆಸರು ಬದಲಾಯಿಸಿಕೊಳ್ಳಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದ್ದು, ಇದು ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.