ಹೈದರಾಬಾದ್: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಗಳಿಸಿದ್ದರು. ಈ ಬಗ್ಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಮಯಾಂಕ್ ಅಂಗರ್ವಾಲ್ ಮೈದಾನದಲ್ಲಿ ದಿವಶತಕದತ್ತ ಮುನ್ನುಗ್ಗುತ್ತಿದ್ದಂತೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪೆವಿಲಿಯನ್ನಲ್ಲಿ ನಿಂತು ಕನ್ನಡಿಗನನ್ನು ಹುರಿದುಂಬಿಸಿದರು. ದ್ವಿಶತಕ ಸಿಡಿಸುವಂತೆ ಸನ್ನೆ ಮಾಡಿ ಯುವ ಆಟಗಾರನನ್ನು ಪ್ರೋತ್ಸಾಹಿಸಿದರು. ಈ ಪಂದ್ಯದ ಬಳಿಕ, ಮಯಾಂಕ್ ದ್ವಿಶತಕದತ್ತ ಮುನ್ನುಗ್ಗಲು ನಿಮ್ಮ ಸಲಹ ಸೂಚನೆ ಎಂದು ಕೇಳಲಾದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.