ರಾಜ್ಕೋಟ್(ಗುಜರಾತ್):ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಆಟವನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಮೈದಾನಕ್ಕಿಳಿದ ಕೆ.ಎಲ್.ರಾಹುಲ್ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕಡೆಯ 10 ಓವರ್ಗಳಲ್ಲಿ ಆಸೀಸ್ ಬೌಲರ್ಗಳ ಬೆವರಿಳಿಸಿದ ರಾಹುಲ್ 52 ಎಸೆತಗಳಲ್ಲಿ 80 ರನ್ ಸಿಡಿಸಿ ಟೀಂ ಇಂಡಿಯಾ ಸವಾಲಿನ ಮೊತ್ತ ಪೇರಿಸುವಲ್ಲಿ ಉತ್ತಮ ಕಾಣಿಕೆ ನೀಡಿದ್ರು. ಈ ಮೂಲಕ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ ನೀಡಿದ ಜವಾಬ್ದಾರಿಯನ್ನ ಸಮರ್ಥವಾಗಿ ಸಿಭಾಯಿಸುವೆ ಎಂಬ ಸಂದೇಶ ರವಾನಿಸಿದ್ರು.
ರಾಹುಲ್ ಪ್ರದರ್ಶನದ ಬಗ್ಗೆ ಮಾತನಾಡಿದ ಕೊಹ್ಲಿ, ರಾಹುಲ್ ಅವರಂತ ಉತ್ತಮ ಆಟಗಾರರನ್ನ ಕೈಬಿಡಲು ಸಾಧ್ಯವಿಲ್ಲ. ಆಸೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ರಾಹುಲ್ ತೋರಿದ ಪ್ರದರ್ಶನ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೆ ಉತ್ತಮ ಪ್ರದರ್ಶನವಾಗಿದೆ. ಅವರ ಆಟದಲ್ಲಿ ಪರಿಪಕ್ವತೆ ಕಾಣುತ್ತಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ನಾವು ಮಾಡಿದ ಯೋಜನೆ ನಮಗೆ ತಿಳಿದಿದೆ ಎಂದು ಪಂದ್ಯಕ್ಕೂ ಮೊದಲು ಹಾಕಿದ್ದ ಪ್ಲಾನ್ ಬಗ್ಗೆ ಹೇಳಿದ್ದಾರೆ.
ಕೆ.ಎಲ್.ರಾಹುಲ್ ಮಿಂಚಿನ ಸ್ಟಂಪಿಂಗ್ ನೀವು ಉತ್ತಮ ಪ್ರದರ್ಶನ ತೋರಿದಾಗ ನಿಮ್ಮಲ್ಲಿರುವ ಇತರ ಕೌಶಲ್ಯಗಳು ಹೊರಬರುತ್ತವೆ. ಸದ್ಯ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿರುವುದು, ಬಹು ಆಯಾಮವುಳ್ಳ ಆಟಗಾರನಂತೆ ಕಾಣುತ್ತಾರೆ. ಆಟರಾರರ ಇಂತಾ ಪ್ರದರ್ಶನ ನಿಜಕ್ಕೂ ಅದ್ಭುತವಾದದ್ದು ಎಂದಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಕೀಪಿಂಗ್ನಲ್ಲೂ ಪಾರಮ್ಯ ಮೆರೆದ ರಾಹುಲ್ ಒಂದು ಸ್ಟಂಪ್ ಮತ್ತು ಎರಡು ಕ್ಯಾಚ್ ಪಡೆದು ಮಿಂಚಿದ್ರು.