ನವದೆಹಲಿ:ಶನಿವಾರ ಎಂಎಸ್ ಧೋನಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದಕ್ಕೆ ಸಚಿನ್, ಗಂಗೂಲಿ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಹಾಲಿ- ಮಾಜಿ ಕ್ರಿಕೆಟಿಗರು ಧೋನಿಗೆ ಶುಭಕೋರಿದ್ದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಬಹಳ ಭಾವನಾತ್ಮವಾಗಿ ಟ್ವೀಟ್ ಮಾಡಿದ್ದಾರೆ.
ಇಡೀ ವಿಶ್ವವೇ ನಿಮ್ಮ ಸಾದನೆಯನ್ನು ನೋಡಿದೆ. ದೇಶಕ್ಕಾಗಿ ಧೋನಿ ಮಾಡಿರುವ ಸಾಧನೆ ಸದಾ ಎಲ್ಲರ ಹೃದಯದಲ್ಲಿ ಉಳಿದಿರುತ್ತದೆ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದಿರುವ ಎಕೈಕ ಕ್ಯಾಪ್ಟನ್ಗೆ ಎಂದು ಕೊಹ್ಲಿ ಶುಭಕೋರಿದ್ದಾರೆ.
" ಪ್ರತಿ ಕ್ರಿಕೆಟಿಗನ ಪಯಣ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕು. ಆದರೆ, ಬಹಳ ಹತ್ತಿರವಾದವರು ನಿವೃತ್ತಿ ನಿರ್ಧಾರ ಕೈಗೊಂಡಾಗ ತುಂಬಾ ದುಃಖವಾಗುತ್ತದೆ. ನಿಮ್ಮ ಸಾಧನೆಗಳು ದೇಶದ ಪ್ರತಿಯೊಬ್ಬರ ಮನದಲ್ಲೂ ಯಾವಾಗಲೂ ಉಳಿದಿರುತ್ತದೆ. ನಾನು ನಿಮ್ಮಿಂದ ಪಡೆದ ಪರಸ್ಪರ ಗೌರವ ನನ್ನಲ್ಲಿ ಮನಸ್ಸಿನಲ್ಲಿ ಸದಾ ಇರುತ್ತದೆ. ಇಡೀ ಪ್ರಪಂಚ ನಿಮ್ಮ ಸಾಧನೆಗಳನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ನಮಗೆ ಇಷ್ಟೆಲ್ಲಾ ನೀಡಿದ ನಿಮಗೆ ಧನ್ಯವಾದಗಳ ಕ್ಯಾಪ್ಟನ್.. ಎಂದು ತಮ್ಮ ಟ್ವಿಟರ್ನಲ್ಲಿ ಕೊಹ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿದ ಸುರೇಶ್ ರೈನಾ ಅವರಿಗೂ ಕೊಹ್ಲಿ ಶುಭ ಹಾರೈಸಿದ್ದಾರೆ. " ನಿಮ್ಮ ಉನ್ನತ ವೃತ್ತಿ ಜೀವನಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ" ಎಂದು ಟ್ವೀಟ್ ಮಾಡಿದ್ದರೆ.
ರೈನಾ ಮತ್ತು ಧೋನಿ ಚೆನ್ನೈ ಸೂಪರ್ಕಿಂಗ್ಸ್ ಪರ ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.