ಮುಂಬೈ: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ಪೇಟಾ (People for the Ethical Treatment of Animals) ಸಂಸ್ಥೆಯ ವರ್ಷದ ಭಾರತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಾಣಿಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ಇದಲ್ಲದೇ ಅಮೆರ್ ಕೋಟೆಯಲ್ಲಿ ಮಾಲತಿ ಹೆಸರಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಪೇಟಾ ಸಂಸ್ಥೆಗೆ ಕೊಹ್ಲಿ ಪತ್ರ ಮುಖೇನ ಮನವಿ ಮಾಡಿದ್ದರು. ಈ ಆನೆಯನ್ನು ಎಂಟು ಮಂದಿ ಮಾರಣಾಂತಿಕವಾಗಿ ಹಲ್ಲೆಗೊಳಿಸಿದ್ದರ ವಿರುದ್ಧ ವಿರಾಟ್ ದನಿಯೆತ್ತಿದ್ದರು.