ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾದ ಬೆನ್ನಲ್ಲೇ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಉಳಿಸಿಕೊಂಡರೂ 12 ರೇಟಿಂಗ್ ಅಂಕ ಕಳೆದುಕೊಂಡಿದ್ದಾರೆ.
ನೂತನ ಟೆಸ್ಟ್ ಶ್ರೇಯಾಂಕ ಬಿಡುಗಡೆಯಾಗಿದ್ದು, ಕೊಹ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಂಡರು 922 ಇದ್ದ ರೇಟಿಂಗ್ ಅಂಕ 910ಕ್ಕೆ ಕುಸಿದಿದ್ದಾರೆ. 913 ಅಂಕ ಪಡೆದಿದ್ದ ಸ್ಮಿತ್ ಕೂಡ 9 ಅಂಕ ಕಳೆದುಕೊಂಡು 904 ಅಂಕ ಪಡೆದು 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.