ಅಡಿಲೇಡ್:ಭಾರತ ಮತ್ತು ಆಸೀಸ್ ಸರಣಿಯಲ್ಲಿ ಹಲವು ದಾಖಲೆ ಬರೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‍ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ತಂಡದ ನಾಯಕನಾಗಿ ಇಲ್ಲಿಯವರೆಗೆ 41 ಶತಕ ಸಿಡಿಸಿರುವ ವಿರಾಟ್, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆ ಜಂಟಿಯಾಗಿ ಅತಿಹೆಚ್ಚು ಶತಕ ಸಿಡಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.
ಇಂದಿನಿಂದ ಆರಂಭವಾಗಲಿರುವ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ರೆ. ತಂಡದ ನಾಯಕನಾಗಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
187 ಪಂದ್ಯಗಳಿಂದ ವಿರಾಟ್ 41 ಶತಕ ಗಳಿಸಿದ್ದರೆ, ರಿಕ್ಕಿ ಪಾಂಟಿಂಗ್ 324 ಪಂದ್ಯಗಳಿಂದ 41 ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 33 ಶತಕ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 20 ಶತಕ ಸಿಡಿಸಿದ್ದಾರೆ.
ಓದಿಟಿ-20 ವಿಶ್ವಕಪ್ನಲ್ಲಿ ಆಸೀಸ್ ವಿರುದ್ಧ ಅಬ್ಬರಿಸಿದ್ದೇ ನನ್ನ ನೆಚ್ಚಿನ ಇನ್ನಿಂಗ್ಸ್: ಸ್ಮಿತ್ ಸಂದರ್ಶನದಲ್ಲಿ ವಿರಾಟ್
ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 22 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ರು. ಅಲ್ಲದೇ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 12 ಸಾವಿರ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಕೂಡ ಬರೆದಿದ್ದರು.