ಕರ್ನಾಟಕ

karnataka

ETV Bharat / sports

ದೇಶದ ಅತ್ಯಂತ ಶ್ರೀಮಂತ ಕ್ರೀಡಾಪಟು ಇವರು... ಬಾಲಿವುಡ್​​ ನಟ,ನಟಿಯರ ಹಿಂದಿಕ್ಕಿದ ಕ್ರಿಕೆಟರ್​​

ಕೊಹ್ಲಿಯ ಬ್ರಾಂಡ್ ಮೌಲ್ಯವು 2019 ರಲ್ಲಿ ಶೇ 39ರಷ್ಟು ಹೆಚ್ಚಳವಾಗಿದ್ದು, 237.5 ಮಿಲಿಯನ್​ಗೆ (16,91,77,18,750(1691 ಕೋಟಿ ರೂ. ಗೆ) ಏರಿದೆ.

By

Published : Feb 6, 2020, 8:17 AM IST

ವಿರಾಟ್ ಕೊಹ್ಲಿ
Virat Kohli

ನವದೆಹಲಿ:ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಇದು ಅವರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ ಕೊಹ್ಲಿಯ ಬ್ರಾಂಡ್ ಮೌಲ್ಯವು ಗಗನಕ್ಕೇರುತ್ತಿದೆ.

ವಿರಾಟ್ ಕೊಹ್ಲಿ

ಜಾಗತಿಕ ಸಲಹಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಕೊಹ್ಲಿಯ ಬ್ರಾಂಡ್ ಮೌಲ್ಯವು 2019 ರಲ್ಲಿ ಶೇ 39 ರಷ್ಟು ಹೆಚ್ಚಳವಾಗಿದ್ದು, 237.5 ಮಿಲಿಯನ್​ಗೆ ಏರಿದೆ. ಈ ಅಧ್ಯಯನವು ಭಾರತೀಯ ಪ್ರಸಿದ್ಧ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ಸೆಲಬ್ರಿಟಿಯಾಗಿದ್ದಾರೆ. ಆಯಾ ಕಂಪನಿಗಳ ಜೊತೆ ಒಪ್ಪಂದ ಪ್ರಕಾರ ಲೆಕ್ಕಹಾಕಿದ ಬ್ರಾಂಡ್ ಮೌಲ್ಯಗಳ ಆಧಾರದ ಮೇಲೆ ಈ ಸ್ಥಾನಗಳನ್ನು ಕೊಡಲಾಗಿದೆ.

ಬ್ರಾಂಡ್ ಮೌಲ್ಯಮಾಪನ ಪಟ್ಟಿ

ಪ್ರಸಕ್ತ ಮೂರು ವರ್ಷದಲ್ಲಿ ಕೊಹ್ಲಿ ತಮ್ಮ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಹೋಗುತ್ತಿದ್ದು, ಬಾಲಿವುಡ್​ ನಟ, ನಟಿಯರಾದ ಅಕ್ಷಯ್​ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​ ಮತ್ತು ಶಾರುಖ್ ಖಾನ್ ಅವರಿಗಿಂತ ಉತ್ತಮ ಬ್ರಾಂಡ್​ ಮೌಲ್ಯವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

2019 ವರ್ಷವು ಕೊಹ್ಲಿಗೆ ಉತ್ತಮವಾಗಿದ್ದು, 2,455 ರನ್​ಗಳನ್ನು ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪ್ರಮಖ ರನ್​ ಮಷಿನ್​ ಆಗಿ ಹೊರಹೊಮ್ಮಿದ್ದಾರೆ. 2019 ರಲ್ಲಿ ಏಳು ಶತಕಗಳ್ನು ಗಳಿಸಿದ್ದಾರೆ.

ಬ್ರಾಂಡ್ ಮೌಲ್ಯಮಾಪನ

ಟಾಪ್ 20 ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಪಟ್ಟಿಯಲ್ಲಿರುವ ಇತರ ಕ್ರೀಡಾಪಟುಗಳು ಎಲ್ಲರೂ ಕ್ರಿಕೆಟಿಗರಾಗಿದ್ದು, ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ 9 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2018 ರಿಂದ ಮೂರು ಸ್ಥಾನಗಳನ್ನು ನೆಗೆದಿದ್ದು, ಬ್ರಾಂಡ್ ಮೌಲ್ಯ 41.2 ಮಿಲಿಯನ್ ಡಾಲರ್ ಆಗಿದೆ. ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ 2019 ಕ್ಕೆ 15 ನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿದ್ದಾರೆ.

ಟಾಪ್ 20 ಸೆಲೆಬ್ರಿಟಿ ಬ್ರಾಂಡ್‌ಗಳ ಒಟ್ಟು ಮೌಲ್ಯವು 1 1.1 ಬಿಲಿಯನ್ ಆಗಿದ್ದು, ಟಾಪ್ 10 ಒಟ್ಟು ಮೌಲ್ಯದ ಶೇ 75ರಷ್ಟಿದೆ.

ABOUT THE AUTHOR

...view details