ಕರ್ನಾಟಕ

karnataka

ETV Bharat / sports

ಐಪಿಎಲ್ 2020.. ಐತಿಹಾಸಿಕ ದಾಖಲೆ ಸನಿಹ ಕಿಂಗ್​​ ಕೊಹ್ಲಿ!!

ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 404 ಪಂದ್ಯಗಳಿಂದ 13,296 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಪೊಲಾರ್ಡ್​,10370 , ಶೋಯಬ್ ಮಲಿಕ್ 9926 ಮೆಕ್ಕಲಮ್​ 9922, ಡೇವಿಡ್ ವಾರ್ನರ್​ 9451 ಹಾಗೂ ಆ್ಯರೋನ್ ಫಿಂಚ್​ 9148 ರನ್​ಗಳಿಸಿ​ ಕೊಹ್ಲಿಗಿಂತ ಮುಂದಿದ್ದಾರೆ..

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Oct 5, 2020, 4:15 PM IST

ದುಬೈ: ಹ್ಯಾಟ್ರಿಕ್ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಡೆಲ್ಲಿ ಕ್ಯಾಪಿಟಲ್ ಸವಾಲನ್ನು ಎದುರಿಸುತ್ತಿದೆ.

ಎರಡು ತಂಡಗಳು 13ನೇ ಆವೃತ್ತಿಯಲ್ಲಿ 3 ಗೆಲುವು ಹಾಗೂ 1 ಸೋಲು ಪಡೆದಿವೆ. ಅಂಕಪಟ್ಟಿಯಲ್ಲಿ ಡೆಲ್ಲಿ ರನ್​ರೇಟ್ ಆಧಾರದ ಮೇಲೆ 2ನೇ ಸ್ಥಾನ ಪಡೆದುಕೊಂಡಿದ್ರೆ, ರಾಯಲ್​ ಚಾಲೆಂಜರ್ಸ್​ 3ನೇ ಸ್ಥಾನ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಲಿದ್ದಾರೆ. ಕೊಹ್ಲಿ ಇಂದಿನ ಪಂದ್ಯದಲ್ಲಿ ಕೇವಲ 10ರನ್​ಗಳಿಸಿದ್ರೆ, ಟಿ-20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಲಿದ್ದಾರೆ. ಈಗಾಗಲೇ ಕೊಹ್ಲಿ 285 ಪಂದ್ಯಗಳಿಂದ 8,990 ರನ್​ಗಳಿಸಿದ್ದಾರೆ. (ಅಂತಾರಾಷ್ಟ್ರೀಯ ಮತ್ತು ಇತರೆ ಟಿ-20) ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 404 ಪಂದ್ಯಗಳಿಂದ 13,296 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಪೊಲಾರ್ಡ್​,10370 , ಶೋಯಬ್ ಮಲಿಕ್ 9926 ಮೆಕ್ಕಲಮ್​ 9922, ಡೇವಿಡ್ ವಾರ್ನರ್​ 9451 ಹಾಗೂ ಆ್ಯರೋನ್ ಫಿಂಚ್​ 9148 ರನ್​ಗಳಿಸಿ​ ಕೊಹ್ಲಿಗಿಂತ ಮುಂದಿದ್ದಾರೆ.

ABOUT THE AUTHOR

...view details