ಕರ್ನಾಟಕ

karnataka

ETV Bharat / sports

ತಂಡದಲ್ಲಿ ಬಿರುಕಿಲ್ಲ,ಧೋನಿಗೆ ನೀಡುವ ಗೌರವವನ್ನು ಯುವ ಆಟಗಾರರಿಗೂ ನೀಡುತ್ತೇನೆ: ಕೊಹ್ಲಿ ಸ್ಪಷ್ಟನೆ - ವಿಂಡೀಸ್​

ಭಾರತ ತಂಡದಲ್ಲಿ ಎಲ್ಲಾ ಆಟಗಾರರ ನಡುವೆ ಉತ್ತಮ ಬಾಂಧವ್ಯವಿದೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಧೋನಿಗೆ ನೀಡುವ ಗೌರವವನ್ನು ಎಲ್ಲಾ ಆಟಗಾರರಿಗೂ ನೀಡಲಾಗುತ್ತಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

Virat Kohli

By

Published : Jul 24, 2019, 8:21 PM IST

ಮುಂಬೈ: ನಾನು ಧೋನಿ ಜೊತೆಗೆ ಹೇಗಿರುತ್ತೇನೋ ಅದೇ ರೀತಿ ನನಗೆ ಕುಲದೀಪ್‌ರಂತಹ ಯುವ ಕ್ರಿಕೆಟಿಗರೊಂದಿಗೂ ಸ್ನೇಹ ಭಾವನೆ ಇದೆ ಎಂದು ಹೇಳುವ ಮೂಲಕ ಕೊಹ್ಲಿ ಡ್ರೆಸ್ಸಿಂಗ್​ ರೂಂ​ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಪೂರ್ಣವಿರಾಮ ನೀಡಿದ್ದಾರೆ.

ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕಿವೀಸ್​ ವಿರುದ್ಧ ಭಾರತ ತಂಡ ಸೋಲನುಭವಿಸಿದ ಮೇಲೆ ತಂಡದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿತ್ತು. ನಾಯಕ ಕೊಹ್ಲಿ ಹಾಗೂ ಕೋಚ್​ ರವಿಶಾಸ್ತ್ರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಉಪನಾಯಕ ರೋಹಿತ್​ ಶರ್ಮಾ ಸೇರಿದಂತೆ ಇತರ ಆಟಗಾರರ ಅಭಿಪ್ರಾಯಗಳನ್ನು ಕೇಳುತ್ತಿಲ್ಲ ಎನ್ನಲಾಗಿತ್ತು.

ಆದರೆ, ಈ ಎಲ್ಲಾ ಗಾಸಿಪ್​ಗಳಿಗೆ ಸ್ಪಷ್ಟನೆ ನೀಡಿರುವ ಕೊಹ್ಲಿ, ಟೀಮ್​ ಇಂಡಿಯಾದಲ್ಲಿ ಉತ್ತಮ ವಾತಾವರಣವಿದೆ. ಎಲ್ಲಾ ಆಟಗಾರರ ನಡುವೆ ಉತ್ತಮ ಬಾಂಧವ್ಯವಿದೆ. ನಾಯಕನಾದ ನಾನು ಎಲ್ಲಾ ಆಟಗಾರರಿಗೂ ಸಮಾನ ರೀತಿಯ ಗೌರವ ಕೊಡುತ್ತೇನೆ. ತಂಡದಲ್ಲಿ ಹಿರಿಯ ಆಟಗಾರ ಧೋನಿ ಜೊತೆಗೆ ಇರುವಷ್ಟೇ ಫ್ರೆಂಡ್ಲಿಯಾಗಿ ಕುಲದೀಪ್​ರಂತ ಯುವ ಆಟಗಾರರ ಜೊತೆಯಲ್ಲೂ ಇರುತ್ತೇನೆ ಎಂದು ತಿಳಿಸಿದ್ದಾರೆ.

ತಂಡದಲ್ಲಿ ಯುವ ಆಟಗಾರರಿಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ನನಗೆ ಯುವ ಆಟಗಾರರ ಸಬಲೀಕರಣದ ಮೇಲೆ ನಂಬಿಕೆಯಿದೆ. ಅವರಲ್ಲಿರುವ ಗೊಂದಲ ಅಥವಾ ಸಲಹೆಗಳನ್ನು ಹಂಚಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದೆ. ತಂಡದಲ್ಲಿ ಗೊಂದಲ ಮೂಡಿಸುವಂಥ ಆಟಗಾರರಿಲ್ಲ ಎಂದು ಹೇಳುವ ಮೂಲಕ ಕೊಹ್ಲಿ ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪ ನಿರಾಧಾರ ಎಂದು ಸ್ಪಷ್ಟೀಕರಿಸಿದ್ದಾರೆ.

ವಿಂಡೀಸ್​ ವಿರುದ್ಧ ಸರಿಯಾದ ಸಮಯಕ್ಕೆ ಟೆಸ್ಟ್​ ಸರಣಿ ಶುರುವಾಗುತ್ತಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕನಾಗಿದ್ದೇನೆ. ಅದಕ್ಕೆ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದೇವೆ ಎಂದು ಕೊಹ್ಲಿ ತಿಳಿಸಿದರು.

ABOUT THE AUTHOR

...view details