ಹೈದರಾಬಾದ್: ಟೀಂ ಇಂಡಿಯಾ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಬ್ಯಾಟ್ ಹಿಡಿದು ಪೋಸ್ ಕೊಟ್ಟಿದ್ದು, ಟೀಂ ಇಂಡಿಯಾ ನಾಯಕ ವಿರಾಟ್, ಚಹಾಲ್ ಕಾಲೆಳೆದಿದ್ದಾರೆ.
ಪೊಲಾರ್ಡ್ ಬ್ಯಾಟ್ ಹಿಡಿದು ಪೋಸ್ ಕೊಟ್ಟ ಚಹಾಲ್ಗೆ ಪಂಚ್ ಕೊಟ್ಟ ಕೊಹ್ಲಿ!! - ಪೊಲಾರ್ಡ್ ಬ್ಯಾಟ್ ಹಿಡಿದು ಪೋಸ್ ಕೊಟ್ಟ ಚಹಾಲ್
ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಬ್ಯಾಟ್ ಹಿಡಿದು ಪೋಸ್ ಕೊಟ್ಟ ಟೀಂ ಇಂಡಿಯಾ ಆಟಗಾರ ಚಹಾಲ್ಗೆ ವಿರಾಟ್ ಟಾಂಗ್ ಕೊಟ್ಟಿದ್ದಾರೆ.
ಕೀರನ್ ಪೊಲಾರ್ಡ್ ಬ್ಯಾಟ್ ಹಿಡಿದಿರುವ ಚಹಾಲ್ 10 ಕೆಜಿ ಬ್ಯಾಟ್ 2.5 ಕೆಜಿ ಕೈಯಲ್ಲಿ ಎಂದು ಕ್ಯಾಪ್ಶನ್ ನೀಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಹಾಲ್ ಪೋಟೊ ನೋಡಿ ಕಮೆಂಟ್ ಮಾಡಿರುವ ಕೊಹ್ಲಿ, 'ನಿನ್ನ ತೊಡೆಗಳಿಗಿಂತಲೂ ಪೊಲಾರ್ಡ್ ಕಾಲಿನ ಮೀನು ಖಂಡಗಳು ದಪ್ಪವಾಗಿವೆ' ಎಂದು ಚಹಾಲ್ ಕಾಲೆಳೆದಿದ್ದಾರೆ.
ಭಾರತ ವಿಂಡೀಸ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಭಾನುವಾರ ಒಡಿಶಾದ ಕಟಕ್ನಲ್ಲಿ ನಡೆಯಲಿದೆ. ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಈ ಹಿಂದೆ ವಿಂಡೀಸ್ ವಿರುದ್ಧ ನಡೆದ 2 ಏಕದಿನ ಪಂದ್ಯಗಳಲ್ಲೂ ಚಹಾಲ್, ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.