ಮುಂಬೈ:ಭಾರತದ ಸೆಲೆಬ್ರೆಟಿ ಜೋಡಿಗಳಲ್ಲಿ ನಂಬರ್ ಒನ್ ಆಗಿರುವ ವಿರುಷ್ಕಾ ಜೋಡಿ ನಿನ್ನೆ 2ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಕೊಹ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್ಅನ್ನು ಅನುಷ್ಕಾಗೆ ಅರ್ಪಿಸಿದ್ದಾರೆ.
ವಿಂಡೀಸ್ ವಿರುದ್ಧ ಸರಣಿ ಗೆಲ್ಲಲು ನಿರ್ಣಾಯಕ ಪಂದ್ಯವಾಗಿದ್ದ ಕೊನೆಯ ಪಂದ್ಯದಲ್ಲಿ ಭಾರತ ತಂಡಕ್ಕೆ ಬೇಡವಾದರೂ ಮೊದಲು ಬ್ಯಾಟಿಂಗ್ ಲಭಿಸಿತ್ತು. ಆದ್ರೂ ಧೃತಿಗೆಡೆದ ಭಾರತದ ಆರಂಭಿಕ ಜೋಡಿಗಳಾದ ರಾಹುಲ್ (91) ಹಾಗೂ ರೋಹಿತ್(71) ರನ್ ಗಳಿಸಿದರೆ, ಇವರಿಗೆ ಸಾಥ್ ನೀಡಿದ ಕೊಹ್ಲಿ ಕೇವಲ 29 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಸಿಡಿಸಿ 70 ರನ್ ಗಳಿಸಿದ್ದರು. ಈ ಮೂವರು ಬ್ಯಾಟ್ಸ್ಮನ್ಗಳ ನೆರವಿನಿಂದ ಭಾರತ 240 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. 241 ರನ್ಗಳ ಟಾರ್ಗೆಟ್ ಪಡೆದಿದ್ದ ವಿಂಡೀಸ್ 8 ವಿಕೆಟ್ ಕಳೆದುಕೊಂಡು178 ರನ್ ಗಳಿಸಲಷ್ಟೇ ಶಕ್ತವಾಗಿ 67 ರನ್ಗಳಿಂದ ಸೋಲು ಕಂಡಿತು.