ಅಹಮದಾಬಾದ್:ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶೂನ್ಯ ಸುತ್ತಿದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ನಂತರದ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ.
4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸಿಗಳಿದ ಕೊಹ್ಲಿ ತಾವು ಎದುರಿಸಿದ 5 ಎಸೆತಗಳಲ್ಲಿ ಕೇವಲ 1ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಭರ್ಜರಿ ಸಿಕ್ಸರ್ನೊಂದಿಗೆ ಟಿ-20 ಖಾತೆ ತೆರೆದ 'ಸೂರ್ಯ': ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ!
ಟಿ20ಯಲ್ಲಿ ಮೊದಲ ಸಲ ಸ್ಟಂಪ್ ಔಟ್!
ಇಂಗ್ಲೆಂಡ್ ತಂಡದ ಸ್ಪಿನ್ನರ್ ರಶೀದ್ ಎಸೆದ 9ನೇ ಓವರ್ನ ಗೂಗ್ಲಿ ಎಸೆತ ಎದುರಿಸಲು ಮುಂದೆ ಹೋದಾಗ ವಿಕೆಟ್ ಕೀಪರ್ ಬಟ್ಲರ್ ವಿರಾಟ್ ಅವರನ್ನು ಸ್ಟಂಪ್ ಮಾಡಿದ್ದಾರೆ. ಕೊಹ್ಲಿ ನಾಲ್ಕು ಏಕದಿನ ಪಂದ್ಯದಲ್ಲಿ ಸ್ಟಂಪ್ ಔಟ್ ಆಗಿದ್ದು, ರಶೀದ್ ಬಲೆಗೆ ಎಂಟು ಸಲ ವಿಕೆಟ್ ಒಪ್ಪಿಸಿದ್ದಾರೆ.