ಕರ್ನಾಟಕ

karnataka

ETV Bharat / sports

ವಿರುಷ್ಕಾ ವಿವಾಹ ಇಟಲಿಯಲ್ಲಿ ನಡೆದಿದ್ದೇಕೆ? ವಿರಾಟ್ ಕೊಟ್ರು ಕಾರಣ - ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ

ಎರಡು ವರ್ಷದ ಹಿಂದೆ ಇಟಲಿಯ ಟಸ್ಕಾನಿಯಲ್ಲಿ ನಟಿ ಅನುಷ್ಕಾ ಶರ್ಮರನ್ನು ಕೊಹ್ಲಿ ವರಿಸಿದ್ದರು. ಈ ವೇಳೆ ಅವರು ದೂರದ ರಾಷ್ಟ್ರದಲ್ಲಿ ಮದುವೆಯಾಗಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಇದೀಗ ವಿರಾಟ್ ಉತ್ತರಿಸಿದ್ದಾರೆ.

ವಿರುಷ್ಕಾ ವಿವಾಹ

By

Published : Sep 6, 2019, 1:27 PM IST

Updated : Sep 6, 2019, 2:12 PM IST

ಹೈದರಾಬಾದ್: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದ ಅನುಷ್ಕಾ ಶರ್ಮ ಕೈ ಹಿಡಿದು ಸುದ್ದಿಯಾಗಿದ್ದರು. ವಿರಾಟ್ ತವರು ದೇಶ ಬಿಟ್ಟು ಇಟಲಿಯಲ್ಲಿ ವಿವಾಹವಾಗಿದ್ದು ಬಹಳ ಚರ್ಚೆಗೂ ಕಾರಣವಾಗಿತ್ತು.

ಎರಡು ವರ್ಷದ ಹಿಂದೆ ಇಟಲಿಯ ಟಸ್ಕಾನಿಯಲ್ಲಿ ನಟಿ ಅನುಷ್ಕಾ ಶರ್ಮರನ್ನು ವರಿಸಿದ್ದ ಕೊಹ್ಲಿ ದೂರದ ರಾಷ್ಟ್ರದಲ್ಲಿ ಮದುವೆಯಾಗಿದ್ದ ಯಾಕೆ ಎನ್ನುವ ಪ್ರಶ್ನೆ ಜೊತೆಗೆ ಟೀಕೆಯೂ ವ್ಯಕ್ತವಾಗಿತ್ತು. ಈ ಪ್ರಶ್ನೆಗೆ ಇದೀಗ ವಿರಾಟ್ ಉತ್ತರ ನೀಡಿದ್ದಾರೆ.

ಕೊಹ್ಲಿ ಕ್ರಿಕೆಟ್ ಲೋಕದ ಜನಪ್ರಿಯ ತಾರೆ, ಅತ್ತ ಅನುಷ್ಕಾ ಶರ್ಮ ಹಿಂದಿಯ ಟಾಪ್ ನಟಿ. ಇವರಿಬ್ಬರ ಮದುವೆ ಭಾರತದಲ್ಲಿ ನಡೆದಿದ್ದರೆ ಆಗಮಿಸುವ ಗಣ್ಯರ ಹಾಗೂ ಅಭಿಮಾನಿಗಳನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗುತ್ತಿತ್ತು. ಹೀಗಾಗಿ ನಾವಿಬ್ಬರೂ ಪರಸ್ಪರ ಮಾತನಾಡಿಕೊಂಡು ಬೇರೆ ದೇಶದಲ್ಲಿ ವಿವಾಹವಾದೆವು ಎಂದು ಕೊಹ್ಲಿ ಕಾರಣ ನೀಡಿದ್ದಾರೆ.

ಇಟಲಿಯ ಟಸ್ಕಾನಿಯಲ್ಲಿ ನಡೆದ ವಿರುಷ್ಕಾ ಮದುವೆಗೆ ಎರಡೂ ಕುಟುಂಬದ ಅತ್ಯಾಪ್ತರಷ್ಟೇ ಆಗಮಿಸಿದ್ದರು. ನಮ್ಮ ಮದುವೆಗೆ ಕೇವಲ 42 ಮಂದಿ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎಂದು ವಿರಾಟ್ ಹೇಳಿದ್ದಾರೆ.

Last Updated : Sep 6, 2019, 2:12 PM IST

ABOUT THE AUTHOR

...view details