ಕರ್ನಾಟಕ

karnataka

ETV Bharat / sports

2020ರಲ್ಲಿ ವಿರಾಟ್ ವೈಫಲ್ಯ: 392 ದಿನ ಕಳೆದರೂ ಶತಕ ಸಿಡಿಸದ ರನ್ ಮಷಿನ್ - 392 ದಿನಗಳಿಂದ ಶತಕ ಬಾರಿಸದ ಕೊಹ್ಲಿ

ವಿರಾಟ್ ಕೊಹ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ ನಡೆದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 136 ರನ್ ಗಳಿಸಿದ್ದು ಕೊನೆಯ ಶತಕವಾಗಿದೆ.

Virat Kohli
ವಿರಾಟ್ ಕೊಹ್ಲಿ

By

Published : Dec 19, 2020, 2:28 PM IST

ನವದೆಹಲಿ:ಕಳೆದೊಂದು ದಶಕದಿಂದ ವಿಶ್ವ ಕ್ರಿಕೆಟ್​ನಲ್ಲಿ ಸ್ಟಾರ್​ ಆಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಆದರೆ 2020ರಲ್ಲಿ ಮಾತ್ರ ಒಂದು ಶತಕವನ್ನೂ ಸಿಡಿಸದೆ ವರ್ಷ ಮುಗಿಸುತ್ತಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾನಡುವಿನ ಮೊದಲ ಟೆಸ್ಟ್ ಮುಕ್ತಾಯವಾಗಿದ್ದು ಪಿತೃತ್ವ ರಜೆ ಮೇಲೆ ವಿರಾಟ್ ತವರಿಗೆ ಮರಳುತ್ತಿದ್ದಾರೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕಣಕ್ಕಿಳಿಯುತ್ತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿರುವ ವಿರಾಟ್ ಕಳೆದ 392 ದಿನಗಳಿಂದ ಒಂದು ಶತಕವನ್ನೂ ಸಿಡಿಸಿಲ್ಲ.

ಓದಿ:ಮೊದಲ ಟೆಸ್ಟ್​ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಆಸ್ಟ್ರೇಲಿಯಾಗೆ 8 ವಿಕೆಟ್​ಗಳ ಭರ್ಜರಿ ಜಯ

2008ರಲ್ಲಿ ಪದಾರ್ಪಣೆ ಮಾಡಿದ್ದ ವಿರಾಟ್, 2009 ರಿಂದ ವರ್ಷದಲ್ಲಿ ಒಂದು ಶತಕವನ್ನಾದರೂ ಸಿಡಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಒಂದು ಶತಕ ಸಿಡಿಸದೆ 2020 ಕ್ಯಾಲೆಂಡರ್ ವರ್ಷವನ್ನು ಪೂರೈಸುತ್ತಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ ನಡೆದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 136 ರನ್ ಗಳಿಸಿದ್ದು ಕೊನೆಯ ಶತಕವಾಗಿದೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೆ 392 ದಿನಗಳು ಕಳೆದಿವೆ.

ABOUT THE AUTHOR

...view details