ಕರ್ನಾಟಕ

karnataka

ETV Bharat / sports

ನನ್ನ ಸಾಧನೆಯಲ್ಲಿ ಎಲ್ಲ ಆಟಗಾರರ ಪಾತ್ರವಿದೆ: ವಿರಾಟ್ ಕೊಹ್ಲಿ - ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾಯಕತ್ವ ಎನ್ನುವುದು ನಿಮ್ಮ ಹೆಸರಿನ ಮುಂದೆ ಇರುವ ಸಿ(C) ಅಷ್ಟೇ, ಗೆಲುವಿನಲ್ಲಿ ಉಳಿದ ಆಟಗಾರರ ಪಾತ್ರ ನಿರ್ಣಾಯಕ ಎಂದಿದ್ದಾರೆ.

ವಿರಾಟ್ ಕೊಹ್ಲಿ

By

Published : Sep 3, 2019, 1:22 PM IST

Updated : Sep 3, 2019, 1:29 PM IST

ಕಿಂಗ್​ಸ್ಟನ್​:ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ ಅತೀ ಹೆಚ್ಚು ಪಂದ್ಯ ಗೆದ್ದ ವಿಶೇಷ ದಾಖಲೆ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಪಂದ್ಯದ ಬಳಿಕ ನಾಯಕತ್ವ ವಿಚಾರವಾಗಿ ಕೊಹ್ಲಿ ಮಾತನಾಡಿದ್ದಾರೆ.

ಧೋನಿ ಹೆಸರಿನಲ್ಲಿದ್ದ ಧೀರ್ಘ ಕಾಲದ ದಾಖಲೆ ಬ್ರೇಕ್​... ಅತಿ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ವಿರಾಟ್​!

ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾಯಕತ್ವ ಎನ್ನುವುದು ನಿಮ್ಮ ಹೆಸರಿನ ಮುಂದೆ ಇರುವ ಸಿ(C) ಅಷ್ಟೇ, ಗೆಲುವಿನಲ್ಲಿ ಉಳಿದ ಆಟಗಾರರ ಪಾತ್ರ ನಿರ್ಣಾಯಕ ಎಂದಿದ್ದಾರೆ.

ಟೆಸ್ಟ್ ಗೆದ್ದ ಸಂಭ್ರಮದಲ್ಲಿ ವಿರಾಟ್ ಬಳಗ

ಪಂದ್ಯದ ಗೆಲುವು ಹಾಗೂ ನಾಯಕನಾಗಿ 28 ಪಂದ್ಯ ಗೆದ್ದಿರುವುದು ಓರ್ವ ವ್ಯಕ್ತಿಯಿಂದ ಆಗಿದ್ದಲ್ಲ. ಪಂದ್ಯದ ಗೆಲುವು ಎಲ್ಲ ಆಟಗಾರರ ಸಾಂಘಿಕ ನಿರ್ವಹಣೆಯಿಂದ ಸಾಧ್ಯವಾಗುತ್ತದೆ ಎಂದು ಕೊಹ್ಲಿ ನುಡಿದಿದ್ದಾರೆ.

ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಇದು ಕೇವಲ ಆರಂಭ. ಹಿಂದಿನ ಯಾವುದೇ ಅಂಕಿ-ಅಂಶಗಳು ಇಲ್ಲಿ ಅನಗತ್ಯ. ಕೆರಬಿಯನ್ನರ ನಾಡಿನ ಈ ಸರಣಿ ಆಟಗಾರರಿಗೆ ಸಾಕಷ್ಟು ಉತ್ತೇಜನ ನೀಡಿದೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ವಿಂಡೀಸ್ ಬೌಲಿಂಗ್ ವಿಭಾಗದ ಪ್ರಯತ್ನವನ್ನು ಕೊಹ್ಲಿ ಪ್ರಶಂಸಿಸಿದ್ದಾರೆ.

ಟೆಸ್ಟ್​ ಸರಣಿ ಕ್ಲೀನ್​ ಸ್ವೀಪ್​​... ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಇಂಡಿಯಾ!

Last Updated : Sep 3, 2019, 1:29 PM IST

ABOUT THE AUTHOR

...view details