ಕರ್ನಾಟಕ

karnataka

ETV Bharat / sports

ಹೌದು ! ಅಂದ್ಕೊಂಡಿದ್ದೇ ಒಂದು, ಆಗಿದ್ದು ಇನ್ನೊಂದು..- ಕ್ಯಾಪ್ಟನ್‌ಗೆ ನಿರಾಶೆ - news kannada

ರಾಂಚಿಯಲ್ಲಿ ಆಸೀಸ್‌ ವಿರುದ್ಧ ಭಾರತ 32 ರನ್‌ನಿಂದ ಸೋತಿದ್ದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿ, ಬಹಳಷ್ಟು ನಿರಾಶೆಗೊಂಡಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿ

By

Published : Mar 9, 2019, 2:32 PM IST

ರಾಂಚಿ: ಆಸೀಸ್‌ ವಿರುದ್ಧ 3ನೇ ಏಕದಿನ ಪಂದ್ಯ ಸೋತಿರುವುದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿ, ಬಹಳಷ್ಟು ನಿರಾಶೆಗೊಂಡಂತೆ ಕಾಣಿಸುತ್ತಿದ್ದಾರೆ. ಸಿಡಿಲಬ್ಬರದ 41ನೇ ಸೆಂಚುರಿ ಭಾರಿಸಿದ ಮೇಲೂ ಪಂದ್ಯ ಸೋಲಿಪ್ಪಿಕೊಂಡಿದ್ದನ್ನ ವಿರಾಟ್‌ ಒಪ್ಪಿಕೊಳ್ಳಲಾಗುತ್ತಿಲ್ಲ.

ರಾಂಚಿಯಲ್ಲಿ ಆಸೀಸ್‌ ವಿರುದ್ಧ ಭಾರತ 32 ರನ್‌ನಿಂದ ಸೋತಿದೆ. ಬಾಲ್‌ ಮತ್ತು ಗುರಿ ತಲುಪಬೇಕಿದ್ದ ಮೊತ್ತದ ಮಧ್ಯೆ 20 ರನ್‌ಗಳ ಅಂತರವಿದ್ದ ಸಂಕಷ್ಟದ ಸಮಯದಲ್ಲೇ ವಿರಾಟ್‌ ಕೊಹ್ಲಿ ಔಟಾಗಿದ್ದರು. ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್‌ಗಳಲ್ಲಿ 313 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಇದಕ್ಕುತ್ತರವಾಗಿ ಭಾರತ 48.2 ಓವರ್‌ಗಳಲ್ಲಿ 281ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಆಸೀಸ್‌ ಒಡ್ಡಿದ್ದ ಸವಾಲನ್ನ ಸಮರ್ಥವಾಗಿ ಬೆನ್ನಟ್ಟಿದ್ದ ಭಾರತ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 95 ಬಾಲ್‌ ಎದುರಿಸಿದ್ದ ಕ್ಯಾಪ್ಟನ್‌ ಕೊಹ್ಲಿ 16 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 123 ರನ್‌ ಪೇರಿಸಿದ್ದರು. ಇದು ತಂಡಕ್ಕೆ ಉಪಯುಕ್ತ ಕೊಡುಗೆಯಾಗಿತ್ತು. ಆಕರ್ಷಕ 41ನೇ ಶತಕ ಸಿಡಿಸಿದ ಮೇಲೂ ಭಾರತ ಸೋತಿದೆ. ಇದು ಕೊಹ್ಲಿ ನಿರಾಶೆಗೊಳ್ಳಲು ಮುಖ್ಯ ಕಾರಣ.

ಆಸೀಸ್‌ಗೆ 350 ರನ್‌ ಪೇರಿಸುವ ಟಾರ್ಗೆಟ್‌ ಇರಿಸಿಕೊಂಡಿತ್ತು. ಆದರೆ, ಮ್ಯಾಕ್ಸ್‌ವೆಲ್‌ ರನೌಟ್‌ ಆದಮೇಲೆ ಅದರಿಂದ ಒಂದಿಷ್ಟು ಹಿನ್ನಡೆಯಾಗಿತ್ತು. ಸಂಜೆ 7.30ರ ನಂತರ ಪಿಚ್ ಟರ್ನ್‌ ತೆಗೆದುಕೊಳ್ಳುತ್ತೆ ಎಂಬ ಟೀಂ ಇಂಡಿಯಾ ನಿರೀಕ್ಷೆ ಹುಸಿಯಾಗಿತ್ತು.

'ಪಿಚ್‌ ಅಷ್ಟೊಂದು ಸರಳವಾಗಿರಲಿಲ್ಲ. ಇಂತಹ ಸಮಯದಲ್ಲಿ ಕೆಟ್ಟ ಎಸೆತಗಳ ಲಾಭ ಪಡೆಯಲು ದೊಡ್ಡ ಹೊಡೆತಕ್ಕೆ ಮುಂದಾಗಬೇಕಾಗುತ್ತೆ. ಪ್ರತಿ ಬ್ಯಾಟ್ಸ್‌ಮೆನ್‌ ಮೇಲೂ ಒತ್ತಡ ಹೆಚ್ಚಾಗುತ್ತಲೇ ಹೋಯಿತು. ನಾನು ಮತ್ತು ವಿಜಯ್‌ ಶಂಕರ್‌ ಔಟಾದ ಮೇಲೆ ನಮಗೆ ಅವಕಾಶವೇ ಇಲ್ಲದಂತಾಯಿತು. ಯಾವುದೇ ತಂಡವಾದರೂ ಬೇಗನೇ ವಿಕೆಟ್‌ಗಳನ್ನ ಕಳೆದುಕೊಳ್ಳಲು ಇಷ್ಟುಪಡುವುದಿಲ್ಲ. 2 ವಿಕೆಟ್ ಕಳೆದುಕೊಂಡ ಮೇಲೆ ಭಾರತದ ತಂಡಕ್ಕೆ ಸಂಕಷ್ಟ ಎದುರಾಯಿತು.

ನಾನು ನನ್ನ ಬ್ಯಾಟಿಂಗ್ ಶೈಲಿಯಲ್ಲಿ ಆಟವಾಡುತ್ತಿದ್ದೆನು. ಆದರೆ, ಉಳಿದ ಬಾಲ್‌ ಮತ್ತು ಗುರಿ ಮಧ್ಯೆ ಬರೀ 20 ರನ್‌ಗಳ ಅಂತರವಿತ್ತು. ಆಗ ನಾನು ಔಟಾಗಿರೋದು ನನಗೆ ತುಂಬಾ ನಿರಾಶೆ ಆಗಲು ಕಾರಣ. ಈ ಮೊದಲಿನ 2 ಪಂದ್ಯಗಳಲ್ಲಿ ತಂಡದಲ್ಲಿ ಕೆಲವೊಂದಿಷ್ಟು ಬದಲಾವಣೆಯಾಗಿತ್ತು. ಆಟಗಾರರು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ ಫ್ಲೈಟ್‌ ಹತ್ತಲು ಸಾಧ್ಯವಾಗುತ್ತೆ' ಅಂತ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ABOUT THE AUTHOR

...view details