ಕರ್ನಾಟಕ

karnataka

ETV Bharat / sports

ಫೈನಲ್​ ಪಂದ್ಯದಲ್ಲೂ ರನ್​ ಹೊಳೆ... ದಾಖಲೆ ಮೇಲೆ ದಾಖಲೆ ಬರೆದ ರನ್​ ಮಷಿನ್​!

ರನ್​ ಮಷಿನ್ ವಿರಾಟ್​​ ಕೊಹ್ಲಿ ಟಿ-20 ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಇಂಗ್ಲೆಂಡ್​ ವಿರುದ್ಧದ ಫೈನಲ್ ಪಂದ್ಯದಲ್ಲಿ ರನ್ ಹೊಳೆ ಹರಿಸಿದ್ದಾರೆ.

Virat Kohli
Virat Kohli

By

Published : Mar 20, 2021, 9:32 PM IST

Updated : Mar 20, 2021, 10:32 PM IST

ಅಹಮದಾಬಾದ್​​: ಇಂಗ್ಲೆಂಡ್​ ವಿರುದ್ಧದ ಫೈನಲ್​​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರನ್​ ಮಷಿನ್​ ಖ್ಯಾತಿಯ ವಿರಾಟ್​​​ ಕೊಹ್ಲಿ ರನ್ ಹೊಳೆ ಹರಿಸಿದ್ದು, ಈ ಮೂಲಕ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡಿದ್ದಾರೆ.

ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಕೊನೆಯ ಟಿ-20 ಪಂದ್ಯದಲ್ಲಿ 36 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ವಿರಾಟ್​ ಕೊಹ್ಲಿ, ಚುಟುಕು ಕ್ರಿಕೆಟ್​​ನಲ್ಲಿ 28ನೇ ಅರ್ಧಶತಕ ಬಾರಿಸಿದ್ದಾರೆ. ಜತೆಗೆ ಟಿ-20 ತಂಡದ ಕ್ಯಾಪ್ಟನ್​ ಆಗಿ ಅತಿ ಹೆಚ್ಚು ಸಲ 50+ ರನ್​ ಗಳಿಸಿರುವ ದಾಖಲೆ ಬರೆದಿದ್ದಾರೆ.

ಟಿ-20 ಕ್ಯಾಪ್ಟನ್​ ಆಗಿ 12 ಸಲ ವಿರಾಟ್​ ಕೊಹ್ಲಿ 50+ ರನ್ ​ಗಳಿಸಿದ್ದಾರೆ. ನ್ಯೂಜಿಲ್ಯಾಂಡ್​​ನ ಕೇನ್​ ವಿಲಿಯಮ್ಸನ್​​(11), ಆಸ್ಟ್ರೇಲಿಯಾದ ಫಿಂಚ್​​​​(10) ಹಾಗೂ ಇಂಗ್ಲೆಂಡ್​ ಕ್ಯಾಪ್ಟನ್​ ಮಾರ್ಗನ್​​ 9 ಸಲ ಅರ್ಧಶತಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟಿ-20ಯಲ್ಲಿ ಮತ್ತೊಂದು ದಾಖಲೆ: ಮಾರ್ಟಿನ್​ ಗಪ್ಟಿಲ್​ ರೆಕಾರ್ಡ್​​ ಬ್ರೇಕ್​ ಮಾಡಿದ ಹಿಟ್ ​ಮ್ಯಾನ್​!

ಇನ್ನು ಟಿ-20 ಕ್ರಿಕೆಟ್​ನ ದ್ವಿಪಕ್ಷೀಯ ಸರಣಿಯಲ್ಲಿ ವಿರಾಟ್​ ಕೊಹ್ಲಿ ಅತಿ ಹೆಚ್ಚು ರನ್ ​ಗಳಿಸಿದ್ದು, ಇಂಗ್ಲೆಂಡ್​ ವಿರುದ್ಧದ ಟಿ-20(ಪ್ರಸಕ್ತ) ಟೂರ್ನಿಯಲ್ಲಿ 5 ಇನ್ನಿಂಗ್ಸ್​​ಗಳಿಂದ 231 ರನ್​ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕ ಸೇರಿಕೊಂಡಿವೆ. ಉಳಿದಂತೆ 2020ರಲ್ಲಿ ಕನ್ನಡಿಗ ರಾಹುಲ್​ ನ್ಯೂಜಿಲ್ಯಾಂಡ್​ ವಿರುದ್ಧ 224 ರನ್ ​ಗಳಿಸಿದ್ರು. ಇದಕ್ಕೂ ಮೊದಲು 2018ರಲ್ಲಿ ಕಾಲಿನ್ ಮುನ್ರೋ 3 ಇನ್ನಿಂಗ್ಸ್​ಗಳಿಂದ 223 ರನ್ ​ಗಳಿಸಿದ್ರು. ಕ್ಯಾಪ್ಟನ್​ ಆಗಿಯೂ ವಿರಾಟ್​​ ಕೊಹ್ಲಿ ಟಿ-20ಯಲ್ಲಿ ಅಧಿಕರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಅವರು 1464 ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಫಿಂಚ್​​​ 1462 ರನ್​ ಹಾಗೂ ವಿಲಿಯಮ್ಸನ್​​ 1383 ರನ್ ಗಳಿಸಿದ್ದಾರೆ.

Last Updated : Mar 20, 2021, 10:32 PM IST

ABOUT THE AUTHOR

...view details